ADVERTISEMENT

ಸೋಹಾ, ಭರತ್‌ಗೆ ಪ್ರಶಸ್ತಿ

ಟೆನಿಸ್: ಎಐಟಿಎ ಚಾಂಪಿಯನ್ ಸರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ಪ್ರಶಸ್ತಿಯ ಖುಷಿ... ಬೆಂಗಳೂರಿನಲ್ಲಿ ಮಂಗಳವಾರ ಮುಕ್ತಾಯವಾದ 16 ವರ್ಷದೊಳಗಿನವರ ಎಐಟಿಎ ಚಾಂಪಿಯನ್‌ಷಿಪ್ ಸರಣಿ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಎಸ್‌. ಸೋಹಾ (ಎಡ), ಭರತ್‌ ನಿಶೋಕ್‌ ಕುಮಾರನ್‌
ಪ್ರಶಸ್ತಿಯ ಖುಷಿ... ಬೆಂಗಳೂರಿನಲ್ಲಿ ಮಂಗಳವಾರ ಮುಕ್ತಾಯವಾದ 16 ವರ್ಷದೊಳಗಿನವರ ಎಐಟಿಎ ಚಾಂಪಿಯನ್‌ಷಿಪ್ ಸರಣಿ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಎಸ್‌. ಸೋಹಾ (ಎಡ), ಭರತ್‌ ನಿಶೋಕ್‌ ಕುಮಾರನ್‌   

ಬೆಂಗಳೂರು: ಭರತ್ ನಿಶೋಕ್ ಕುಮಾರನ್ ಹಾಗೂ ಎಸ್. ಸೋಹಾ ಇಲ್ಲಿನ ಟಾಪ್ ಸ್ಪಿನ್ ಅಕಾಡೆಮಿಯಲ್ಲಿ  ಮುಕ್ತಾಯಗೊಂಡ 16 ವರ್ಷದೊಳಗಿನವರ ಎಐಟಿಎ ಚಾಂಪಿಯನ್‌ಷಿಪ್ ಸರಣಿ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಬಾಲಕರ ವಿಭಾಗದ ಪ್ರಶಸ್ತಿ ಘಟ್ಟದ ಹಣಾಹಣಿಯಲ್ಲಿ ಭರತ್ 7–6, 6–2ರಿಂದ ರಿಷಿ ರೆಡ್ಡಿ ಅವರನ್ನು ಮಣಿಸಿದರು. 

ಬಾಲಕಿಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ  ಸೋಹಾ 2–6, 6–3, 6–2 ರಲ್ಲಿ ರಶ್ಮಿಕಾ ರಾಜನ್ ಎದುರು ಗೆದ್ದರು.

ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಪ್ರಣಶ್ ಬಾಬು ಮತ್ತು ಆದಿಲ್ ಕಲ್ಯಾಣಪುರ್ ಜೋಡಿ 6–4, 6–3 ರಲ್ಲಿ ಸಿದ್ದಾರ್ಥ್ ಎನ್‌. ಗೌಡ ಮತ್ತು ರಾಹುಲ್ ಶಂಕರ್ ಜೋಡಿಯನ್ನು ಪರಾಭವಗೊಳಿಸಿ ಚಾಂಪಿಯನ್ ಆದರು.

ಬಾಲಕಿಯರ ವಿಭಾಗದ ಡಬಲ್ಸ್ ಫೈನಲ್ ಪಂದ್ಯದಲ್ಲಿ ನಿಶಾ ಶೆಣೈ ಮತ್ತು ರಶ್ಮಿಕಾ  ರಾಜನ್ ಜೋಡಿ 6–2, 7–6 ರಲ್ಲಿ ಶಿವಾನಿ ಮಂಜಣ್ಣ ಮತ್ತು ಎಸ್. ಸೋಹಾ ಎದುರು ಜಯ ಸಾಧಿಸಿ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.