ADVERTISEMENT

ಸೌತ್ ವೇಲ್ಸ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2011, 19:30 IST
Last Updated 28 ಸೆಪ್ಟೆಂಬರ್ 2011, 19:30 IST
ಸೌತ್ ವೇಲ್ಸ್‌ಗೆ ರೋಚಕ ಜಯ
ಸೌತ್ ವೇಲ್ಸ್‌ಗೆ ರೋಚಕ ಜಯ   

ಚೆನ್ನೈ (ಪಿಟಿಐ): ಸೂಪರ್ ಓವರ್‌ನಲ್ಲಿ ಟ್ರಿನಿಡಾಡ್ ಅಂಡ್ ಟೊಬಾಗೊ ತಂಡವನ್ನು ಮಣಿಸಿದ ನ್ಯೂ ಸೌತ್ ವೇಲ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ತನ್ನದಾಗಿಸಿಕೊಂಡಿತು.

ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯ `ಟೈ~ನಲ್ಲಿ ಅಂತ್ಯಗೊಂಡ ಕಾರಣ ವಿಜೇತರನ್ನು ನಿರ್ಣಯಿಸಲು ಸೂಪರ್ ಓವರ್‌ನ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಟ್ರಿನಿಡಾಡ್ ಪರ ರವಿ ರಾಂಪಾಲ್ ಬೌಲ್ ಮಾಡಿದರು.

ಎಲ್ಲ ಆರೂ ಎಸೆತಗಳನ್ನು ಎದುರಿಸಿದ ನ್ಯೂ ಸೌತ್ ವೇಲ್ಸ್ ತಂಡದ ಮೊಯ್ಸಸ್ ಹೆನ್ರಿಕ್ಸ್ ನಾಲ್ಕು ಬೌಂಡರಿಗಳ ನೆರವಿನಿಂದ 18 ರನ್ ಪೇರಿಸಿದರು. ಟ್ರಿನಿಡಾಡ್ ಗೆಲುವು ಪಡೆಯಲು ಒಂದು ಓವರ್‌ನಲ್ಲಿ 19 ರನ್ ಗಳಿಸಬೇಕಿತ್ತು.

ವೇಲ್ಸ್ ಪರ ಬೌಲ್ ಮಾಡಿದ್ದು ಸ್ಟೀವ್ ಒಕೀಫ್. ಆದರೆ ಟ್ರಿನಿಡಾಡ್ ಬ್ಯಾಟ್ಸ್‌ಮನ್‌ಗಳಾದ ಲೆಂಡ್ಲ್ ಸಿಮಾನ್ಸ್ ಮತ್ತು ಅಡ್ರಿಯಾನ್ ಭರತ್ 15 ರನ್ ಗಳಿಸಲಷ್ಟೇ ಯಶಸ್ವಿಯಾದರು.

ಇದಕ್ಕೂ ಮೊದಲು ಟ್ರಿನಿಡಾಡ್ ಅಂಡ್ ಟೊಬಾಗೊ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 139 ರನ್ ಪೇರಿಸಿದ್ದರೆ, ನ್ಯೂ ಸೌತ್ ವೇಲ್ಸ್ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ಇಷ್ಟೇ ರನ್ ಕಲೆಹಾಕಿತ್ತು.

ಸೌತ್ ವೇಲ್ಸ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 17 ರನ್‌ಗಳ ಅವಶ್ಯಕತೆಯಿತ್ತು. ಮೊಯ್ಸಸ್ ಹೆನ್ರಿಕ್ಸ್ ಮತ್ತು ಪ್ಯಾಟ್ ಕಮಿನ್ಸ್ 16 ರನ್ ಕಲೆಹಾಕಿದ ಕಾರಣ ಪಂದ್ಯ `ಟೈ~ನಲ್ಲಿ ಅಂತ್ಯಕಂಡಿತು.

ಸಂಕ್ಷಿಪ್ತ ಸ್ಕೋರ್: ಟ್ರಿನಿಡಾಡ್ ಅಂಡ್ ಟೊಬಾಗೊ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 139 (ಲೆಂಡ್ಲ್ ಸಿಮಾನ್ಸ್ 41, ಡರೆನ್ ಗಂಗಾ 21, ದಿನೇಶ್ ರಾಮ್ದಿನ್ 19, ಮೊಯ್ಸಸ್ ಹೆನ್ರಿಕ್ಸ್ 27ಕ್ಕೆ 1). ನ್ಯೂ ಸೌತ್ ವೇಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 139 (ಡೇವಿಡ್ ವಾರ್ನರ್ 38, ಸೈಮನ್ ಕ್ಯಾಟಿಚ್ 23, ಮೊಯ್ಸಸ್ ಹೆನ್ರಿಕ್ಸ್ ಔಟಾಗದೆ 18, ಡರೆನ್ ಗಂಗಾ 26ಕ್ಕೆ 3) ಫಲಿತಾಂಶ: ಪಂದ್ಯ `ಟೈ~, ಸೂಪರ್ ಓವರ್‌ನಲ್ಲಿ ನ್ಯೂ ಸೌತ್ ವೇಲ್ಸ್‌ಗೆ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.