ADVERTISEMENT

ಸ್ಕ್ವಾಷ್: ದೀಪಿಕಾ- ಜೋಶ್ನಾ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:25 IST
Last Updated 21 ಏಪ್ರಿಲ್ 2011, 19:25 IST

ಚೆನ್ನೈ (ಪಿಟಿಐ): ಭಾರತದ ದೀಪಿಕಾ ಪಲ್ಲಿಕಲ್ ಮತ್ತು ಜೋಶ್ನಾ ಚಿನ್ನಪ್ಪ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಐಎಸ್‌ಪಿಎ ಚಾಲೆಂಜಸ್ ಸೀರಿಸ್ ಸ್ಕ್ವಾಷ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ದೀಪಿಕಾ ಅವರು ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ 11-6, 11-5, 11-6 ರಲ್ಲಿ ಆಸ್ಟ್ರೇಲಿಯದ ಮೆಲೊಡಿ ಫ್ರಾನ್ಸಿಸ್ ಅವರನ್ನು ಮಣಿಸಿದರು.

ಜೋಶ್ನಾ ಅವರು 11-4, 11-5, 11-6 ರಲ್ಲಿ ಜಪಾನ್‌ನ ಮಿಸಾಕಿ ಕೊಬಯಶಿ ವಿರುದ್ಧ ಜಯ ಪಡೆದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ಡೋನಾ ಅಕ್ವರ್ಟ್ ತಮ್ಮದೇ ದೇಶದ ಲೀಸಾ ಕ್ಯಾಮಿಲೆರಿ ಅವರ ಸವಾಲನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.