ADVERTISEMENT

ಸ್ವಸ್ತಿಕ್‌ ಯೂನಿಯನ್‌ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST

ಬೆಂಗಳೂರು: ಕೆಎಸ್‌ಸಿಎ ಆಶ್ರಯದಲ್ಲಿ ನಡೆಯುತ್ತಿರುವ ಮೊದಲನೇ ಗುಂಪಿನ ಒಂದು, ಎರಡು ಮತ್ತು ಮೂರನೇ ಡಿವಿಷನ್‌ನ 16 ವರ್ಷದೊಳಗಿನವರ ಅಂತರ ಕ್ಲಬ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಕ್ರಿಕೆಟರ್ಸ್‌ ತಂಡವನ್ನು ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2) 9 ವಿಕೆಟ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಕ್ರಿಕೆಟರ್ಸ್‌ ತಂಡವು 50 ಓವರ್‌ಗಳಲ್ಲಿ 149ರನ್‌ಗಳಿಗೆ ಆಲೌಟಾಯಿತು. ಸ್ವಸ್ತಿಕ್‌ ತಂಡದ ಪರವಾಗಿ 4 ವಿಕೆಟ್‌ ಕಬಳಿಸಿದ ಅನೀಶ್ವರ್‌, ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾದರು. ಯಶ್ವಂತ್‌ (74) ಹಾಗೂ ಜೆ ಬೊರಾ (50) ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಸ್ವಸ್ತಿಕ್‌ ತಂಡವು ಕೇವಲ 16.1 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಗುರಿ ಬೆನ್ನಟ್ಟಿತು.

ಇನ್ನೊಂದು ಪಂದ್ಯದಲ್ಲಿ ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (2), ಮಲ್ಲೇಶ್ವರಂ ಜಿಮ್ಖಾನಾ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಮಾಡರ್ನ್‌ ಕ್ರಿಕೆಟ್‌ ಕ್ಲಬ್‌ ತಂಡವನ್ನು ಸೋಷಿಯಲ್‌ ಕ್ರಿಕೆಟರ್ಸ್‌ ತಂಡವು 6 ವಿಕೆಟ್‌ಗಳಿಂದ ಪರಾಭವಗೊಳಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 149ಕ್ಕೆ ಆಲೌಟ್‌ (ಆರ್‌. ಚಿರಂತ್‌ 50, ಕೀರ್ತನ್‌ ಔಟಾಗದೆ 29, ಆಯುಷ್‌ ಕುಮಾರ್‌ 29ಕ್ಕೆ 2, ಅನೀಶ್ವರ್‌ 16ಕ್ಕೆ 4). ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2) : 16.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 150 (ಯಶ್ವಂತ್‌ 74, ಜೆ ಬೊರಾ 50) ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ ತಂಡಕ್ಕೆ 9 ವಿಕೆಟ್‌ಗಳಿಂದ ಜಯ.

ಮಲ್ಲೇಶ್ವರಂ ಜಿಮ್ಖಾನಾ: 35.1 ಓವರ್‌ಗಳಲ್ಲಿ 128ಕ್ಕೆ ಆಲೌಟ್‌ (ಆದೇಶ್‌ 40, ಪ್ರತೀಕ್‌ 21, ಸೂಫಿಯಾನ್‌ 27ಕ್ಕೆ 4). ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (2): 29.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 130 (ಆಯುಷ್‌ 40, ಪೃಥ್ವಿ 26). ಫಲಿತಾಂಶ: ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ಗೆ 6 ವಿಕೆಟ್‌ಗಳಿಂದ ಗೆಲುವು.

ಮಾಡರ್ನ್‌ ಕ್ರಿಕೆಟ್‌ ಕ್ಲಬ್‌: 38.5 ಓವರ್‌ಗಳಲ್ಲಿ 200ಕ್ಕೆ ಆಲೌಟ್‌ (ಸೃಜನ್‌ ನಂದನ್‌ 82, ಭರತ್‌ 48ಕ್ಕೆ 4, ಸ್ವರೂಪ್‌ 16ಕ್ಕೆ 2).  ಸೋಷಿಯಲ್‌ ಕ್ರಿಕೆಟರ್ಸ್‌: 43.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 201 (ಸಚಿನ್‌ ಶರ್ಮಾ 50, ಆದಿತ್ಯ ಉಡುಪ ಔಟಾಗದೆ 47, ಡಿ. ವಿಶಾಲ್‌ 26ಕ್ಕೆ 2). ಫಲಿತಾಂಶ: ಸೊಷಿಯಲ್‌ ಕ್ರಿಕೆಟರ್ಸ್‌ಗೆ 6 ವಿಕೆಟ್‌ಗಳಿಂದ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.