ADVERTISEMENT

ಹಾಕಿ ಆಟಗಾರರ ಮೊಬೈಲ್‌ಮೇಲೆ ನಿಗಾ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ನವದೆಹಲಿ (ಐಎಎನ್‌ಎಸ್): ಕ್ರಿಕೆಟ್‌ನಲ್ಲಿ ಕೇಳಿಬಂದಿರುವ ಮ್ಯಾಚ್ ಫಿಕ್ಸಿಂಗ್ ಭೂತ, ಇತರ ಕ್ರೀಡೆಗಳನ್ನು ಜಾಗೃತಗೊಳಿಸಿದಂತಿದೆ. ಮ್ಯಾಚ್ ಫಿಕ್ಸಿಂಗ್‌ನಂತಹ ಘಟನೆಗಳ ಪತ್ತೆಗೆ ಹಾಕಿ ಇಂಡಿಯಾ (ಎಚ್‌ಐ) ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ.

ಆಟಗಾರರ ದೂರವಾಣಿ ಕರೆಗಳ ಮೇಲೆ ಕಣ್ಗಾವಲು ಇಡಲು ಪೊಲೀಸರಿಗೆ ಅವಕಾಶ ಕಲ್ಪಿಸಲು `ಹಾಕಿ ಇಂಡಿಯಾ ನಿಯಮಾವಳಿ'ಯಲ್ಲಿ ಒಂದು ವಿಧಿಯನ್ನು ಸೇರ್ಪಡೆಗೊಳಿಸಲಿದೆ.

`ನಿಯಮವೊಂದನ್ನು ಸೇರಿಸಲು ನಿಯಮಾವಳಿಗೆ ತಿದ್ದುಪಡಿ ಮಾಡಲಾಗುವುದು. ಈ ಸಂಬಂಧ ಕಾರ್ಯಕಾರಿ ಮಂಡಳಿಯ ಮುಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ' ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೀಂದ್ರ ಬಾತ್ರಾ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಮೇಲೆ ಹದ್ದಿನ ಕಣ್ಣಿಡಲು ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇದೀಗ ಆಟಗಾರರ ದೂರವಾಣಿ ಕರೆಗಳ ಮೇಲೆ ನಿಗಾ ಇಡಲು ಪೊಲೀಸರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿಯಮವೊಂದನ್ನು ತರಲು ಯತ್ನಿಸುತ್ತಿದ್ದೇವೆ' ಎಂದು ಬಾತ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.