ADVERTISEMENT

ಹಾಕಿ: ಬ್ಲ್ಯೂ ಸ್ಟಾರ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಬೆಂಗಳೂರು: ಬ್ಲ್ಯೂ ಸ್ಟಾರ್ ಹಾಕಿ ಕ್ಲಬ್ ತಂಡದವರು ರೇನ್ ಬೋ ಹಾಕಿ ಕ್ಲಬ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬ್ಲ್ಯೂ ಸ್ಟಾರ್ 5-0 ಗೋಲುಗಳಿಂದ ಚಿತ್ರದುರ್ಗ ಹಾಕಿ ಕ್ಲಬ್ ತಂಡವನ್ನು ಸೋಲಿಸಿತು.

ಏಕಪಕ್ಷೀಯವಾಗಿ ಕೊನೆಗೊಂಡ ಈ ಪಂದ್ಯದಲ್ಲಿ ವಿಜಯಿ ತಂಡದ ಶ್ಯಾಮ್ 5ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ನಂತರ ಚುರುಕಿನ ಆಟವಾಡಿದ ಮಂದಣ್ಣ (11 ಹಾಗೂ 51ನೇ ನಿಮಿಷ), ನಾನಯ್ಯ (33ನೇ ನಿ.) ಹಾಗೂ ಶಾನ್ ಬೋಪಯ್ಯ (40ನೇ ನಿ.) ಗೋಲು ಗಳಿಸಿ ಬ್ಲೂ ಸ್ಟಾರ್ ಹಾಕಿ ಕ್ಲಬ್ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

ಶುಕ್ರವಾರದ ಪಂದ್ಯಗಳು: ಬ್ಲ್ಯೂ ಸ್ಪಾರ್ ಹಾಕಿ ಕ್ಲಬ್-ಐಟಿಐ (ಮಧ್ಯಾಹ್ನ 3.00ಕ್ಕೆ) ಹಾಗೂ ರೇನ್ ಬೋ ಹಾಕಿ ಕ್ಲಬ್-ಬಿಇಎಂಎಲ್ ಬೆಂಗಳೂರು (ಸಂಜೆ 4.30ಕ್ಕೆ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.