ADVERTISEMENT

ಹಾಕಿ ಲೀಗ್: ರಾಂಚಿ ರೈನೋಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2014, 19:30 IST
Last Updated 1 ಫೆಬ್ರುವರಿ 2014, 19:30 IST
ಲಖನೌದಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಲೀಗ್‌ನಲ್ಲಿ ರಾಂಚಿ ರೈನೋಸ್‌ನ ಆಟಗಾರನನ್ನು ತಪ್ಪಿಸಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಉತ್ತರ ಪ್ರದೇಶ ವಿಜಾರ್ಡ್ಸ್‌ ತಂಡದ ನಿಕಿನ್‌ ತಿಮ್ಮಯ್ಯ (ಬಲ) ಪ್ರಯತ್ನಿಸಿದರು	 –ಪಿಟಿಐ ಚಿತ್ರ
ಲಖನೌದಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಲೀಗ್‌ನಲ್ಲಿ ರಾಂಚಿ ರೈನೋಸ್‌ನ ಆಟಗಾರನನ್ನು ತಪ್ಪಿಸಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಉತ್ತರ ಪ್ರದೇಶ ವಿಜಾರ್ಡ್ಸ್‌ ತಂಡದ ನಿಕಿನ್‌ ತಿಮ್ಮಯ್ಯ (ಬಲ) ಪ್ರಯತ್ನಿಸಿದರು –ಪಿಟಿಐ ಚಿತ್ರ   

ಲಖನೌ (ಪಿಟಿಐ): ಹಾಲಿ ಚಾಂಪಿಯನ್‌ ರಾಂಚಿ ರೈನೋಸ್ ತಂಡ ಉತ್ತರ ಪ್ರದೇಶ ವಿಜಾರ್ಡ್ಸ್‌ ಎದುರು ಇಲ್ಲಿ ನಡೆದ ಹಾಕಿ ಇಂಡಿಯಾ ಲೀಗ್‌ ಟೂರ್ನಿಯ ಪಂದ್ಯದಲ್ಲಿ  ಜಯ ದಾಖಲಿಸಿದೆ.

ಮೇಜರ್ ಧ್ಯಾನ್‌ಚಂದ್‌ ಕ್ರೀಡಾಂ ಗಣ ದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೈನೋಸ್ 2–1 ಗೋಲುಗಳಿಂದ ವಿಜಾರ್ಡ್ಸ್ ತಂಡವನ್ನು ಸೋಲಿಸಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದ 18ನೇ ನಿಮಿಷದಲ್ಲಿ ರೈನೋಸ್‌ ತಂಡದ ಡ್ರ್ಯಾಗ್ ಫ್ಲಿಕ್ಕರ್ ಆ್ಯಸ್ಲೆ ಜಾಕ್ಸನ್‌ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲುಬಾರಿಸಿ ಮುನ್ನಡೆ ಒದಗಿಸಿಕೊಟ್ಟರು.

ಇದರ ಬೆನ್ನಲ್ಲೇ  ಬ್ಯಾರಿ ಮಿಡ್ಲಟನ್‌ (26ನೇ ನಿಮಿಷ)  ಮತ್ತೊಂದು ಗೋಲು ತಂದುಕೊಡುವ ಮೂಲಕ ವಿರಾಮದ ವೇಳೆಗೆ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ವಿರಾಮದ ನಂತರ ಆಕ್ರಮಣಕಾರಿ ಆಟಕ್ಕಿಳಿದ ವಿಜಾರ್ಡ್ಸ್‌ ತಂಡದ ಆಟಗಾರರು  ಗೋಲುಗಳಿಸುವ  ಅವಕಾಶ ಪಡೆದಿದ್ದರು. ಆದರೆ ಎದುರಾಳಿ ತಂಡದ ಡಿಫೆನ್ಸ್‌ ವಿಭಾಗ ಇದಕ್ಕೆ ಆಸ್ಪದ ನೀಡಲಿಲ್ಲ.

ಪಂದ್ಯದ 50ನೇ ನಿಮಿಷದಲ್ಲಿ ವಿಜಾರ್ಡ್ಸ್‌ನ ಎಡ್ವರ್ಡ್‌ ಒಕೆಂಡೆನ್ ಗೋಲುಬಾರಿಸಿದರಾರು.ಆದರೆ   ಅಂತಿಮ ಕ್ಷಣಗಳಲ್ಲಿ ರೈನೋಸ್‌ ಆಟ ಗಾರರು ರಕ್ಷಣಾತ್ಮಕ ಆಟವಾಡುವ ಮೂಲಕ ಪಂದ್ಯವನ್ನು ಕೈವಶ ಮಾಡಿ ಕೊಂಡು ಸಂಭ್ರಮಿಸಿದರು.

ತಲಾ ಮೂರು ಪಂದ್ಯಗಳನ್ನು ಆಡಿರುವ ಯುಪಿ ವಿಜಾರ್ಡ್ಸ್‌ ಮತ್ತು ರೈನೋಸ್‌ ತಂಡಗಳು ತಲಾ 11 ಪಾಯಿಂಟ್‌ ಕಲೆಹಾಕುವ ಮೂಲಕ ಜಂಟಿಯಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.

ವಿಜಾರ್ಡ್ಸ್‌ ತಂಡ ಭಾನುವಾರ  ನಡೆ ಯುವ ಪಂದ್ಯದಲ್ಲಿ ಪಂಜಾಬ್ ವಾರಿ ಯರ್ಸ್‌ ಸವಾಲನ್ನು ಎದುರಿಸಲಿದೆ. ಫೆ. 4 ರಂದು  ರೈನೋಸ್‌ ತಂಡ ಮುಂಬೈ ಮ್ಯಾಜೀಷಿಯನ್ ಜೊತೆ ಕಾದಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.