ಜಲಂಧರ್ (ಪಿಟಿಐ): ಚುರುಕಿನ ಆಟದ ಮೂಲಕ ಸ್ಥಳೀಯ ಪ್ರೇಕ್ಷಕರನ್ನು ರಂಜಿಸಿದ ಶೇರ್ -ಎ- ಪಂಜಾಬ್ ತಂಡದವರು ಇಲ್ಲಿ ನಡೆದ ಚೊಚ್ಚಲ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿದರು.
ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ 6-1ಗೋಲುಗಳಿಂದ ಕರ್ನಾಟಕ ಲಯನ್ಸ್ ತಂಡವನ್ನು ಸೋಲಿಸಿತು.
ಹಾಕಿ ಸರಣಿಯಲ್ಲಿ ಕರ್ನಾಟಕ ತಂಡಕ್ಕೆ ಎದುರಾದ ಎರಡನೇ ಸೋಲು ಇದು. ಮೊದಲ ಪಂದ್ಯದಲ್ಲಿ ಡೆಲ್ಲಿ ವಿಜಾರ್ಡ್ಸ್ ಎದುರು ಸೋಲು ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.