ADVERTISEMENT

ಹಾಕಿ: ಹರಿಯಾಣ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಸೋನೆಪತ್ (ಐಎಎನ್‌ಎಸ್):  ಹರಿಯಾಣ ತಂಡ ಶುಕ್ರವಾರ ಇಲ್ಲಿ ಕೊನೆಗೊಂಡ ಹಾಕಿ ಇಂಡಿಯಾ ಆಶ್ರಯದ ಎರಡನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಫೈನಲ್‌ನಲ್ಲಿ ಹರಿಯಾಣ 5-4 ಗೋಲುಗಳಿಂದ ಚಂಡೀಗಡ ತಂಡವನ್ನು ಸೋಲಿಸಿತು. ವಿಜಯಿ ತಂಡದ ನವಜೋತ್ ಕೌರ್ (24ನೇ ನಿಮಿಷ), ನವನೀತ್ ಕೌರ್ (44ನೇ ನಿ.), ರೀನಾ ರಾಣಿ (55ನೇ ನಿ, 67ನೇ ನಿ.) ಗಳಿಸಿದರು.

16ನೇ ನಿಮಿಷದಲ್ಲಿ ಚಂಡೀಗಡ ತಂಡ ಉಡುಗೊರೆ ಗೋಲು ನೀಡಿತ್ತು. ಚಂಡೀಗಡದ ಹರ್ದೀಪ್ ಕೌರ್ (3ನೇ ನಿ.), ಪೂಜಾ ರಾಣಿ (14ನೇ, 59ನೇ ನಿ.) ಹಾಗೂ ನವಪ್ರೀತ್ ಕೌರ್ (52ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.