ನವದೆಹಲಿ (ಪಿಟಿಐ): ಐಪಿಎಲ್ ಒಂಬತ್ತನೇ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾದ ಜಾನ್ ಹಾಸ್ಟಿಂಗ್ ಗಾಯಗೊಂಡಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹೀಗಾಗಿ ನೈಟ್ರೈಡರ್ಸ್ ಫ್ರಾಂಚೈಸ್ ಹಾಸ್ಟಿಂಗ್ ಬದಲು ಕಾಂಗರೂಗಳ ನಾಡಿನ ಮತ್ತೊಬ್ಬ ವೇಗಿ ಶಾನ್ ಟೈಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಈ ಬಾರಿಯ ಆಟಗಾರರ ಹರಾಜಿ ನಲ್ಲಿ 33 ವರ್ಷದ ಟೈಟ್ ಅವರನ್ನು ಖರೀದಿಸಲು ಯಾವ ಫ್ರಾಂಚೈಸ್ ಕೂಡಾ ಮುಂದೆ ಬಂದಿರಲಿಲ್ಲ. ಆಸ್ಟ್ರೇಲಿಯಾದ ಬಲಗೈ ವೇಗಿ ಬುಧವಾರ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.
ನೈಟ್ರೈಡರ್ಸ್ ತಂಡ ಶನಿವಾರ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡ ವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟೈಟ್ ಕಣಕ್ಕಿಳಿಯುವ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.