ADVERTISEMENT

12ರಿಂದ ನಾಲ್ಕನೇ ಹಂತದ ಟೂರ್ನಿ

ಕೆವಿಎಲ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಬೆಂಗಳೂರು: ಕರ್ನಾಟಕ ವಾಲಿಬಾಲ್‌ ಸಂಸ್ಥೆ (ಕೆವಿಎ) ಆಶ್ರಯದಲ್ಲಿ ಕುಮಾರಸ್ವಾಮಿ ಲೇಔಟ್‌ನ ಹೊಯ್ಸಳ ಯುವ ಮತ್ತು ಕ್ರೀಡಾ ಸಂಸ್ಥೆ ಪ್ರಾಯೋಜ ಕತ್ವದಲ್ಲಿ ಮಾರ್ಚ್‌ 12 ರಿಂದ ಕರ್ನಾಟಕ ವಾಲಿಬಾಲ್‌ ಲೀಗ್‌ ನಾಲ್ಕನೇ ಹಂತದ ಟೂರ್ನಿ ನಡೆಯಲಿದೆ.

ಒಟ್ಟು ಐದು ದಿನಗಳ ಕಾಲ (ಮಾ. 12ರಿಂದ 16) ನಡೆ ಯುವ ಈ ಟೂರ್ನಿಯ ಪಂದ್ಯ ಗಳು ಕುಮಾರಸ್ವಾಮಿ ಲೇಔಟ್‌ನ ಎರಡನೇ ಹಂತದಲ್ಲಿರುವ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆಯಲಿವೆ.

ಐದನೇ ಹಾಗೂ ಅಂತಿಮ ಹಂತದ ಟೂರ್ನಿಯು ಮಾರ್ಚ್‌ 19 ರಿಂದ 23ರವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈಗಾಗಲೇ ಮೂರು ಹಂತದ ಟೂರ್ನಿಗಳು ಮುಕ್ತಾಯ ಗೊಂಡಿದ್ದು ಡಿವೈಇಎಸ್‌ ತಂಡ 15 ಪಂದ್ಯಗಳಿಂದ 33 ಪಾಯಿಂಟ್‌ ಪಡೆದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಜೆಎಸ್‌ಡಬ್ಲ್ಯು (31) ಹಾಗೂ ಬಿಎಸ್‌್ಎನ್‌ಎಲ್‌ (29) ನಂತರದ ಸ್ಥಾನಗಳಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.