ನವದೆಹಲಿ (ಪಿಟಿಐ): ದಕ್ಷಿಣ ಏಷ್ಯಾ ಫೆಡರೇಷನ್ (ಸ್ಯಾಫ್) ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆ ಸಂಬಂಧ ದಿನಾಂಕ ನಿಗದಿಪಡಿಸಲು ಮಾರ್ಚ್ 27ರಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಕಾರ್ಯಕಾರಿ ಸಮಿತಿ ಸಭೆ ಇಲ್ಲಿ ನಡೆಯಲಿದೆ.
ಸ್ಯಾಫ್ ಕ್ರೀಡಾಕೂಟ ಈ ಬಾರಿ ಭಾರತದಲ್ಲಿ ನಡೆಯಲಿದೆ. 2010ರಲ್ಲಿ ಢಾಕಾದಲ್ಲಿ ಈ ಕ್ರೀಡಾಕೂಟ ನಡೆದಿತ್ತು. 2012 ರಲ್ಲಿ ಭಾರತ ಈ ಕೂಟ ಆಯೋಜಿ ಸಬೇಕಿತ್ತು. ಆದರೆ ಐಒಎ ಮೇಲೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಮಾನತು ಶಿಕ್ಷೆ ವಿಧಿಸಿದ್ದ ರಿಂದ ಕೂಟ ನಡೆದಿರಲಿಲ್ಲ.
ಕೇರಳದಲ್ಲಿ ಆಯೋಜಿಸಲು ಈ ಮೊದಲೇ ನಿರ್ಧರಿಸಲಾಗಿ ರುವ 35ನೇ ರಾಷ್ಟ್ರೀಯ ಕ್ರೀಡಾ ಕೂಟಕ್ಕೂ ದಿನಾಂಕ ನಿಗದಿಪಡಿಸ ಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಪದೇ ಪದೇ ಮುಂದೂಡಲಾ ಗುತ್ತಿದೆ. 34ನೇ ಕ್ರೀಡಾಕೂಟವನ್ನು ಆರು ಬಾರಿ ಮುಂದೂಡ ಲಾಗಿತ್ತು.
ಕೇರಳದಲ್ಲಿ ಈ ಕೂಟ 2012 ರಲ್ಲಿಯೇ ನಡೆಯಬೇಕಿತ್ತು. ಆದರೆ ಹಲವು ಬಾರಿ ಮುಂದೂಡ ಲಾಗಿದೆ. 36ನೇ ಕ್ರೀಡಾಕೂಟ ಗೋವಾದಲ್ಲಿ ಆಯೋಜಿಸಲು ಈಗಾಗಲೇ ನಿರ್ಧರಿಸಲಾಗಿದೆ.
ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ಅಥ್ಲೀಟ್‌ಗಳ ಸಿದ್ಧತೆ ಬಗ್ಗೆಯೂ ಸಭೆ ಸಮಾಲೋಚನೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.