ADVERTISEMENT

ಚೆನ್ನೈಯಿನ್ ಎಫ್‌ಸಿ ಕೋಚ್‌ಗೆ ಮೂರು ಪಂದ್ಯ ನಿಷೇಧ

ಪಿಟಿಐ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST

ಚೆನ್ನೈ: ರೆಫರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಚೆನ್ನೈಯಿನ್ ಎಫ್‌ಸಿ ತಂಡದ ಮುಖ್ಯ ಕೋಚ್ ಜಾನ್ ಗ್ರೆಗೊರಿ ಅವರಿಗೆ ಮೂರು ಪಂದ್ಯಗಳ ನಿಷೇಧ ಹಾಗೂ ₹ 4 ಲಕ್ಷ ದಂಡ ವಿಧಿಸಲಾಗಿದೆ.

ಡಿಸೆಂಬರ್‌ 28ರಂದು ನಡೆದ ಜೆಮ್‌ಷೇಡ್‌ಪುರ ಎಫ್‌ಸಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಪಂದ್ಯದ ವೇಳೆ ಗ್ರೆಗೊರಿ ಅವರು ರೆಫರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಪಂದ್ಯದಲ್ಲಿ ಚೆನ್ನೈ ತಂಡ 1–0 ಗೋಲಿನಿಂದ ಗೆದ್ದಿತ್ತು.

ನಿಷೇಧ ಶಿಕ್ಷೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಐಎಸ್‌ಎಲ್‌ ಮೂಲಗಳು ಹೇಳಿವೆ.

ADVERTISEMENT

‘ಕಲಂ 50 (ಪಂದ್ಯದ ರೆಫರಿಯನ್ನು ದಾರಿ ತಪ್ಪಿಸುವ ಪ್ರಯತ್ನ), ಕಲಂ 58 (ಅವಹೇಳನಾಕಾರಿ ಹೇಳಿಕೆ ಹಾಗೂ ನ್ಯಾಯವಲ್ಲದ ಆಟ) ಉಲ್ಲಂಘಿಸಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಶಿಸ್ತು ಸಮಿತಿ ಹೇಳಿದೆ.

ಶಿಸ್ತು ಸಮಿತಿ ನಿಯಮಗಳನ್ನು ಉಲ್ಲಂಘಿಸಿದ್ದ ಡೆಲ್ಲಿ ಡೈನಮೋಸ್ ತಂಡದ ಕೋಚ್‌ ಕ್ಲಾಡಿಯೊ ಮಥಾಯಿಸ್ ಮತ್ತು ಮುಂಬೈ ಎಫ್‌ಸಿ ತಂಡದ ಕೋಚ್‌ ಸ್ನೇಹರಾಜ್ ಸಿಂಗ್‌ ಅವರಿಗೂ ಕ್ರಮವಾಗಿ ನಾಲ್ಕು ಮತ್ತು ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ.

ಮಥಾಯಿಸ್ ಅವರಿಗೆ ₹3 ಲಕ್ಷ ಹಾಗೂ ಸ್ನೇಹರಾಜ್ ಅವರಿಗೆ ₹ 2ಲಕ್ಷ ದಂಡವನ್ನೂ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.