ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ, ಆಲ್ ರೌಂಡರ್ ಸನತ್ ಜಯಸೂರ್ಯ ಅವರು ವೃತ್ತಿ ಜೀವನದಿಂದ ನಿವೃತ್ತರಾದ ನಂತರ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. 'ಮಟಾರಾ ಮರೌದೆಕ್' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್ ತಂಡದ ಹೊಡೆಬಡಿ ದಾಂಡಿಗರಾಗಿದ್ದರು.
48ರ ಹರೆಯದ ಜಯಸೂರ್ಯ ನಿವೃತ್ತಿ ಹೊಂದಿದ ನಂತರ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಊರುಗೋಲು (crutches) ಇಲ್ಲದೆ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ.
1996ರಲ್ಲಿ ಶ್ರೀಲಂಕಾಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಪಂದ್ಯಗಳಲ್ಲಿ ಪ್ರಧಾನ ಪಾತ್ರವಹಿಸಿದ್ದ ಜಯಸೂರ್ಯ, ಇದೀಗ ಚಿಕಿತ್ಸೆಗಾಗಿ ಮೆಲ್ಬರ್ನ್‍ಗೆ ಹೋಗಲಿದ್ದಾರೆ. ಒಂದು ತಿಂಗಳ ಕಾಲ ಜಯಸೂರ್ಯ ಚಿಕಿತ್ಸೆಗೊಳಪಡಲಿದ್ದು, ವೈದ್ಯರ ನಿಗಾದಲ್ಲಿರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.