ಸಿಡ್ನಿ: ರಷ್ಯಾದ ಎಕಟೆರಿನಾ ಮಕರೊವಾ ಭಾನುವಾರ ಇಲ್ಲಿ ಆರಂಭವಾದ ಸಿಡ್ನಿ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಅವರು 7–6, 6–1ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಜೆಲೆನಾ ಓಸ್ತಪೆಂಕೊಗೆ ಆಘಾತ ನೀಡಿದ್ದಾರೆ.
ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿದ್ದ ಮಕರೊವಾ ಸೆಮಿಫೈನಲ್ ತಲುಪುವ ಮೂಲಕ ಅಚ್ಚರಿ ಮೂಡಿಸಿದ್ದರು. ಇಲ್ಲಿ ಲಾಟ್ವಿಯಾದ ಆಟಗಾರ್ತಿ ಓಸ್ತಪೆಂಕೊ ಎದುರು ಅಮೋಘ ಸಾಮರ್ಥ್ಯದೊಂದಿಗೆ ಹೋರಾಡಿದರು.
ಮೊದಲ ಸೆಟ್‌ನಲ್ಲಿ 5–3ರಲ್ಲಿ ಮುನ್ನಡೆ ಹೊಂದಿದ್ದ ಮಕರೊವಾ ಬಳಿಕ ಟೈ ಬ್ರೇಕರ್‌ನಲ್ಲಿ ಗೆಲುವು ಒಲಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.