ADVERTISEMENT

ರನ್‌ ಪೇರಿಸಲು ಪರದಾಡುತ್ತಿರುವ ದಕ್ಷಿಣ ಆಫ್ರಿಕಾ

ಏಜೆನ್ಸೀಸ್
Published 25 ಜನವರಿ 2018, 14:28 IST
Last Updated 25 ಜನವರಿ 2018, 14:28 IST
ಜಸ್‌ಪ್ರಿತ್‌ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದ ಫಾಪ್‌ ಡಿ ಪ್ಲೆಸಿಸ್‌ ಪೆವಿಲಿಯನ್‌ ಕಡೆ ನಡೆದರು.
ಜಸ್‌ಪ್ರಿತ್‌ ಬೂಮ್ರಾ ಬೌಲಿಂಗ್‌ನಲ್ಲಿ ಔಟಾದ ಫಾಪ್‌ ಡಿ ಪ್ಲೆಸಿಸ್‌ ಪೆವಿಲಿಯನ್‌ ಕಡೆ ನಡೆದರು.   

ಜೊಹಾನ್ಸ್‌ಬರ್ಗ್‌: ಭುವನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬೂಮ್ರಾರ ಬೌಲಿಂಗ್‌ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ರನ್‌ಗಳನ್ನು ಪೇರಿಸಲು ಪರದಾಡುತ್ತಿದೆ.

ಹಸಿಮ್‌ ಆಮ್ಲಾ ಮತ್ತು ವೆರ್‌ನಾನ್‌ ಫಿಲಾಂಡರ್‌ ಸದ್ಯ ಕ್ರೀಸ್‌ನಲ್ಲಿದ್ದು ಭಾರತ ತಂಡ ಗಳಿಸಿದ 187 ರನ್‌ ದಾಟಿಸಲು ಶ್ರಮಿಸುತ್ತಿದ್ದಾರೆ.  ದ.ಆಫ್ರಿಕಾ ತಂಡ 57 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 159 ರನ್‌ಗಳನ್ನು ಗಳಿಸಿದೆ.

ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಏಡನ್ ಮರ್ಕರಮ್ ವಿಕೆಟ್ ಕಬಳಿಸಿ ತಂಡದಲ್ಲಿ ಸಂಭ್ರಮ ಉಕ್ಕಿಸಿದ್ದ ಭುವನೇಶ್ವರ್‌, ಡೀನ್‌ ಎಲ್ಗರ್‌ ಮತ್ತು ಎಬಿಡಿ ವಿಲಿಯರ್ಸ್‌ ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಜಸ್‌ಪ್ರಿತ್‌ ಬೂಮ್ರಾ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಫಾಪ್‌ ಡಿ ಪ್ಲೆಸಿಸ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ರ ವಿಕೆಟ್‌ ಪಡೆದಿದ್ದಾರೆ. ಕಗಿಸೊ ರಬಾಡರನ್ನು ಇಶಾಂತ್‌ ಶರ್ಮಾ ಪೆವಿಲಿಯನ್‌ಗೆ ಕಳುಹಿಸಿದ್ದಾರೆ.

ADVERTISEMENT

ಹಾಸಿಮ್‌ ಆಮ್ಲಾ 59  ಮತ್ತು ಫಿಲಾಂಡರ್‌ 22 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವೈಟ್‌ ವಾಷ್‌ನಿಂದ ತಪ್ಪಿಸಿಕೊಳ್ಳಲು ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.