ADVERTISEMENT

ಸುಮಿತ್‌, ಕಮಾನಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸುಮಿತ್‌ ತಲ್ವಾರ್‌ (ಎಡ) ಹಾಗೂ ಅಮೀ ಕಮಾನಿ ಪ್ರಶಸ್ತಿ ಗೆದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸುಮಿತ್‌ ತಲ್ವಾರ್‌ (ಎಡ) ಹಾಗೂ ಅಮೀ ಕಮಾನಿ ಪ್ರಶಸ್ತಿ ಗೆದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಛತ್ತೀಸಗಡದ ಸುಮಿತ್ ತಲ್ವಾರ್ ಹಾಗೂ ಮಧ್ಯಪ್ರದೇಶದ ಅಮೀ ಕಮಾನಿ ಶನಿವಾರ ಇಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪುರುಷರ ವಿಭಾಗದ ಫೈನಲ್‌ನಲ್ಲಿ ಸುಮಿತ್‌ (6–1) 57–49, 45–77, 66–39, 80–51, 76–44, 66–58, 61–54ರಲ್ಲಿ ಆರ್‌ಎಸ್‌ಪಿಬಿ ತಂಡದ ಮಲ್ಕೀತ್‌ ಸಿಂಗ್‌ಗೆ ಸೋಲುಣಿಸಿದರು. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮನನ್ ಚಂದ್ರ ಅವರು ಶಹಬಾಜ್ ವಿರುದ್ಧ ಗೆದ್ದರು.

ವರ್ಷಾಗೆ ಸೋಲು: ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ವರ್ಷಾ ಸೋತಿದ್ದಾರೆ. ಅಮೀ ಕಮಾನಿ 39–65, 67–21, 54–57, 43–48, 71–46, 59–24, 50–38ರಲ್ಲಿ ವರ್ಷಾ ಎದುರು ಜಯಿಸಿದರು. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ ಕರ್ನಾಟಕದ ವಿದ್ಯಾ ಪಿಳ್ಳೈ 17–59, 62–49, 70–25ರಲ್ಲಿ ಕೀರತ್‌ ಭಂಡಾಲ್‌ ವಿರುದ್ಧ ಗೆದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.