ADVERTISEMENT

ಬಾಂಗ್ಲಾದಲ್ಲಿ ಆಡಲಿರುವ ಸಲ್ಮಾನ್ ಬಟ್‌

ಪಿಟಿಐ
Published 6 ಫೆಬ್ರುವರಿ 2018, 19:50 IST
Last Updated 6 ಫೆಬ್ರುವರಿ 2018, 19:50 IST
ಸಲ್ಮಾನ್ ಬಟ್‌
ಸಲ್ಮಾನ್ ಬಟ್‌   

ಢಾಕಾ: ಸ್ಪಾಟ್ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಐದು ವರ್ಷಗಳ ನಿಷೇಧಕ್ಕೆ ಒಳಗಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್‌ ಬಾಂಗ್ಲಾದೇಶದಲ್ಲಿ ಆಡಲು ಸಜ್ಜಾಗಿದ್ದಾರೆ.

ಇಲ್ಲಿ ನಡೆಯಲಿರುವ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ನೀಡಿದೆ. ಲೀಗ್‌ನಲ್ಲಿ ಅವರು ಮಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ಪರವಾಗಿ ಆಡಲಿದ್ದಾರೆ. ಬಾಂಗ್ಲಾದೇಶದ ಆಲ್‌ರೌಂಡ್ ಆಟಗಾರ ಶಕೀಬ್ ಅಲ್ ಹಸನ್ ಈ ತಂಡದ ನಾಯಕ. ಬುಧವಾರ ಬ್ರದರ್ಸ್ ಯೂನಿಯನ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬಟ್‌ ಲೀಗ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT