ADVERTISEMENT

ಇಂಡಿಯನ್ ಸೂಪರ್ ಲೀಗ್: ನಾರ್ತ್‌ ಈಸ್ಟ್‌ಗೆ ಪುಣೆ ಸವಾಲು

ಸೇಡು ತೀರಿಸುವ ಭರವಸೆಯಲ್ಲಿ ಆತಿಥೇಯರು

ಪಿಟಿಐ
Published 6 ಫೆಬ್ರುವರಿ 2018, 20:07 IST
Last Updated 6 ಫೆಬ್ರುವರಿ 2018, 20:07 IST
ನಾರ್ತ್ ಈಸ್ಟ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಪುಣೆ ಎಫ್‌ಸಿ ತಂಡದ ಆಟಗಾರರು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ
ನಾರ್ತ್ ಈಸ್ಟ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಪುಣೆ ಎಫ್‌ಸಿ ತಂಡದ ಆಟಗಾರರು ಗೆಲ್ಲುವ ವಿಶ್ವಾಸ ಹೊಂದಿದ್ದಾರೆ   

ಗುವಾಹಟಿ: ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋತು ಆಘಾತ ಕಂಡಿರುವ ಎಫ್‌ಸಿ ಪುಣೆ ಸಿಟಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಗೆಲುವಿನ ಹುಮ್ಮಸ್ಸಿನಲ್ಲಿದೆ.

ಇಂಡಿಯನ್‌ ಸೂಪರ್ ಲೀಗ್‌ನ ಬುಧವಾರದ ಪಂದ್ಯದಲ್ಲಿ ಈ ತಂಡ ಪುಣೆ ಎಫ್‌ಸಿ ವಿರುದ್ಧ ಸೆಣಸಲಿದೆ. ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪುಣೆ ತಂಡಕ್ಕೆ ಇಲ್ಲಿ ಜಯ ಅನಿವಾರ್ಯ.

ಲೀಗ್‌ನಲ್ಲಿ ಮೊದಲ ಬಾರಿ ಎದುರಾದಾಗ ಪುಣೆ ಎಫ್‌ಸಿ ತಂಡ ನಾರ್ತ್ ಈಸ್ಟ್ ವಿರುದ್ಧ 5-0 ಅಂತರದ ಜಯ ಗಳಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಈಗ ತವ ರಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಶ್ರಮಿ ಸಲಿದೆ. ಲೀಗ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ‘ದಾಖಲೆ’ ಹೊಂದಿರುವ ಪುಣೆಯನ್ನು ಮಣಿಸುವುದು ಕಷ್ಟಸಾಧ್ಯವಲ್ಲ ಎಂಬ ಸ್ಥೈರ್ಯ ಆತಿಥೇಯರ ಭರವಸೆ ಹೆಚ್ಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.