ADVERTISEMENT

ಕಿಶನ್ ಗಂಗೂಲಿಗೆ ಪ್ರಶಸ್ತಿ

ಪಿಟಿಐ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST

ಮುಂಬೈ: ಕರ್ನಾಟಕದ ಕಿಶನ್ ಗಂಗೂಲಿ ಅವರು ದೃಷ್ಟಿ ದೋಷವುಳ್ಳವರ 13ನೇ ಆವೃತ್ತಿಯ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಅಖಿಲ ಭಾರತ ಅಂಧರ ಚೆಸ್‌ ಫೆಡರೇಷನ್‌ ವತಿಯ ಟೂರ್ನಿಯಲ್ಲಿ ಗಂಗೂಲಿ ಸತತ ಐದನೇ ಬಾರಿ ಚಾಂಪಿಯನ್ ಆಗಿದ್ದಾರೆ. ಒಟ್ಟು 10.5 ಪಾಯಿಂಟ್ಸ್‌ ಸಂಗ್ರಹಿಸಿದ ಅವರು ಮೊದಲ ಸ್ಥಾನ ಪಡೆದರು. 9.5 ಪಾಯಿಂಟ್ಸ್‌ಗಳಿಂದ ಗುಜರಾತ್‌ನ ಅಶ್ವಿನ್‌ ಮಕ್ವಾನ ಎರಡನೇ ಸ್ಥಾನ ಪಡೆದರೆ, ಒರಿಸ್ಸಾದ ಸೌಂದರ್ಯ ಕುಮಾರ್ ಪ್ರಧಾನ್‌ 9 ಪಾಯಿಂಟ್ಸ್‌ಗಳಿಂದ ಮೂರನೇ ಸ್ಥಾನ ಪಡೆದರು.

ಮಹಾರಾಷ್ಟ್ರದ ಆರ್ಯನ್ ಜೋಷಿ 8.5 ಪಾಯಿಂಟ್ಸ್ ಪಡೆದು ನಾಲ್ಕನೇ ಸ್ಥಾನ ಗಳಿಸಿದರು.

ADVERTISEMENT

ಅಂತಿಮ ಸುತ್ತಿನಲ್ಲಿ ಕಿಶನ್‌ ಒರಿಸ್ಸಾದ ಪ್ರಚುರ್ಯ ಕುಮಾರ್ ಪ್ರಧಾನ್ ಎದುರು ಡ್ರಾ ಮಾಡಿಕೊಂಡರು. ಇಲ್ಲಿ ಮೊದಲ ಐದು ಸ್ಥಾನ ಪಡೆದ ಸ್ಪರ್ಧಿಗಳು ಜುಲೈ ತಿಂಗಳಿನಲ್ಲಿ ಬಲ್ಗೇರಿಯಾದಲ್ಲಿ ನಡೆಯುವ ಅಂಧರ ‘ವಿಶ್ವ ತಂಡ ಚಾಂಪಿಯನ್‌ಷಿಪ್‌’ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.