ADVERTISEMENT

ಕುಮಾರ ಸಂಗಕ್ಕರ ದಾಖಲೆ ಮುರಿದ ಎಂ.ಎಸ್‌. ದೋನಿ

ಏಜೆನ್ಸೀಸ್
Published 19 ಫೆಬ್ರುವರಿ 2018, 11:49 IST
Last Updated 19 ಫೆಬ್ರುವರಿ 2018, 11:49 IST
ಎಂ.ಎಸ್‌.ದೋನಿ(ಸಂಗ್ರಹ ಚಿತ್ರ).
ಎಂ.ಎಸ್‌.ದೋನಿ(ಸಂಗ್ರಹ ಚಿತ್ರ).   

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆದ ಮೊದಲ ಟ್ವಿಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ವಿಕೆಟ್‌ ಕೀಪರ್‌ ಆಗಿ 134 ಕ್ಯಾಚ್‌ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಎಂ.ಎಸ್‌. ದೋನಿ ಅವರು ಅಂತರರಾಷ್ಟ್ರೀಯ ಟ್ವಿಂಟಿ–20 ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಹೆಚ್ಚು ಕ್ಯಾಚ್‌ ಪಡೆದ ದಾಖಲೆಯನ್ನು ತಮ್ಮದಾಗಿಸಿಕೊಂಡರು. 275 ಪಂದ್ಯಗಳಲ್ಲಿ ದೋನಿ 134 ಕ್ಯಾಚ್‌ ಪಡೆದಿದ್ದಾರೆ. ಕುಮಾರ ಸಂಗಕ್ಕರ 254 ಪಂದ್ಯಗಳಲ್ಲಿ 133 ಕ್ಯಾಚ್‌ ಪಡೆದಿದ್ದಾರೆ.

ದಿನೇಶ್‌ ಕಾರ್ತಿಕ್‌ (227 ಪಂದ್ಯ 123 ಕ್ಯಾಚ್), ಕಮ್ರಾನ್ ಅಕ್ಮಲ್‌ (211 ಪಂದ್ಯ, 115 ಕ್ಯಾಚ್‌), ದಿನೇಶ್‌ ರಾಮ್ದಿನ್( 168 ಪಂದ್ಯ, 108 ಕ್ಯಾಚ್‌) ನಂತರದ ಸ್ಥಾನದಲ್ಲಿದ್ದಾರೆ.

ADVERTISEMENT

ಭಾನುವಾರ ದಕ್ಷಿಣ ಆಫ್ರಿಕಾದ ರೀಜಾ ಹೆನ್ರಿಕ್ಸ್‌ ಅವರ ಕ್ಯಾಚ್‌ ಪಡೆಯುವ ಮೂಲಕ ದೋನಿ ಸಂಗಕರ ದಾಖಲೆ ಹಿಂದಿಕ್ಕಿದ್ದಾರೆ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 28 ರನ್‌ ಜಯ ಸಾಧಿಸಿತ್ತು. ಜತೆಗೆ, ಮೂರು ಪಂದ್ಯ ಟ್ವಿಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಭಾರತ 1–0ರಲ್ಲಿ ಮುನ್ನಡೆ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.