ADVERTISEMENT

ಹಾಕಿ: ಎಎಸ್‌ಸಿ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

ಬೆಂಗಳೂರು: ಬಿ.ಭೇಂಗ್ರಾ, ಕೈಚಳಕದಲ್ಲಿ ಅರಳಿದ ಮೂರು ಗೋಲುಗಳಬಲದಿಂದ ಎಎಸ್‌ಸಿ ತಂಡದವರು 21ನೇ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಶಾಂತಿನಗರದ ಸಮೀಪವಿರುವ ಕಾರ್ಯಪ್ಪ ಹಾಕಿ ಅರೇನಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 5–0 ಗೋಲುಗಳಿಂದ ಕಸ್ಟಮ್ಸ್‌ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಚುರುಕಾಗಿ ಆಡಿದ ಎಎಸ್‌ಸಿ ತಂಡ 2ನೇ ನಿಮಿಷದಲ್ಲಿ ಖಾತೆ ತೆರೆಯಿತು. ಭೇಂಗ್ರಾ ಅಮೋಘ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿದರು. 24ನೇ ನಿಮಿಷದಲ್ಲಿ ಸುಜಿತ್‌ ಟೊಪ್ಪೊ ಗೋಲು ಗಳಿಸಿ 2–0ರ ಮುನ್ನಡೆಗೆ ಕಾರಣರಾದರು. 48 ಮತ್ತು 62ನೇ ನಿಮಿಷಗಳಲ್ಲಿ ಭೇಂಗ್ರಾ ಮಿಂಚಿದರು. 70ನೇ ನಿಮಿಷದಲ್ಲಿ ಮಿನಿಲ್‌ ಟೊಪ್ಪೊ ಚೆಂಡನ್ನು ಗುರಿ ಮುಟ್ಟಿಸಿ ಎಎಸ್‌ಸಿ ಸಂಭ್ರಮಕ್ಕೆ ಕಾರಣರಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.