ADVERTISEMENT

ಸ್ಟಾರ್‌ ಸಂಸ್ಥೆಗೆ ಐಪಿಎಲ್‌ ಪ್ರಸಾರ ಹಕ್ಕು

ಪಿಟಿಐ
Published 19 ಫೆಬ್ರುವರಿ 2018, 19:30 IST
Last Updated 19 ಫೆಬ್ರುವರಿ 2018, 19:30 IST

ಮುಂಬೈ (ಪಿಟಿಐ): ದಿ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯು 2018ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯ ಆಡಿಯೊ ಹಾಗೂ ವಿಡಿಯೋ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

ಐಪಿಎಲ್ ಮಾತ್ರವಲ್ಲ 2018–2019ರ ಸಾಲಿನ ಬಿಸಿಸಿಐ ದೇಶೀಯ ಟೂರ್ನಿಗಳ ಪ್ರಸಾರದ ಹಕ್ಕನ್ನು ಕೂಡ ಸ್ಟಾರ್ ಸಂಸ್ಥೆ ಪಡೆದುಕೊಂಡಿದೆ.

ಸ್ಟಾರ್‌ ಸಂಸ್ಥೆಯೊಂದಿಗೆ ಬಿಸಿಸಿಐ ಮಾಡಿಕೊಂಡ ಒಪ್ಪಂದದ ಮೊತ್ತವನ್ನು ಬಹಿರಂಗಪಡಿಸಿಲ್ಲ. ‘2018ರ ಒಂದು ಆವೃತ್ತಿಯ ಐಪಿಎಲ್ ಪ್ರಸಾರದ ಹಕ್ಕನ್ನು ಮಾತ್ರ ಸ್ಟಾರ್ ಸಂಸ್ಥೆ ಪಡೆದುಕೊಂಡಿದೆ’ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಮುಂದಿನ ವರ್ಷದ ಐಪಿಎಲ್‌ ಟೂರ್ನಿಯವರೆಗೂ ಪ್ರಸಾರದ ಹಕ್ಕನ್ನು ಮುಂದುವರಿಸುವ ಪ್ರಸ್ತಾಪ ಇದೆ. ಆದರೆ ಆ ನಿರ್ಧಾರವನ್ನು ಕಾಯ್ದಿರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.