ADVERTISEMENT

ಮಹಿಳೆಯರ ಟ್ವೆಂಟಿ–20 ಪಂದ್ಯ ಮಳೆಗೆ ಆಹುತಿ

ಶತಕದ ಜೊತೆಯಾಟ ಲಿಜೆಲಿ, ನೀಕರ್ಕ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಸೆಂಚೂರಿಯನ್‌ (ಎಎಫ್‌ಪಿ): ಸರಣಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದ ಭಾರತ ತಂಡದ ಎದುರು ದಕ್ಷಿಣ ಆಫ್ರಿಕಾ ತಂಡದವರು ದಿಟ್ಟ ಆಟ ವಾಡಿದರು. ಆದರೆ ಉಭಯ ತಂಡಗಳ ಆಸೆಗೆ ಮಳೆ ತಣ್ಣೀರು ಸುರಿಯಿತು.

ಇಲ್ಲಿ ಬುಧವಾರ ನಡೆದ ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯರ ಆರಂಭಿಕ ಆಟಗಾರ್ತಿ ಯರಾದ ಲಿಜೆಲ್ ಲೀ (58; 38 ಎಸೆತ, 5 ಸಿ, 2 ಬೌಂ) ಮತ್ತು ಡೇನ್‌ ವ್ಯಾನ್ ನೀಕರ್ಕ್‌ (55; 47 ಎ, 2 ಸಿ, 6 ಬೌಂ) ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು.

13ನೇ ಓವರ್‌ನಲ್ಲಿ ನೀಕರ್ಕ್ ಔಟಾದಾಗ ತಂಡದ ಮೊತ್ತ 103 ಆಗಿತ್ತು. ಮತ್ತೆ ಮೂರು ರನ್‌ ಗಳಿಸುವಷ್ಟರಲ್ಲಿ ಕ್ಲಾ ಟ್ರಯಾನ್‌ ಔಟಾದರು. ಸೂನ್ ಲೂಜ್‌ ಕೂಡ ಬೇಗನೇ ಮರಳಿದರು. ನಂತರ ಲೀ ಮತ್ತು ಮಿಗ್ನಾನ್‌ ಡು ಪ್ರೀಜ್‌ ತಂಡಕ್ಕೆ ಆಸರೆಯಾದರು. ಅಷ್ಟರಲ್ಲಿ ಮಳೆ ಕಾಡಿತು. ಒಂದು ತಾಸಿಗೂ ಹೆಚ್ಚು ಕಾಲ ಕಾದ ನಂತರ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಐದು ಪಂದ್ಯ ಗಳ ಸರಣಿಯಲ್ಲಿ ಭಾರತ 2–1ರ ಮುನ್ನಡೆ ಗಳಿಸಿದೆ.

ADVERTISEMENT

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: 15.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 130 (ಲಿಜೆಲ್ ಲೀ 58, ಡೇನ್‌ ವ್ಯಾನ್ ನೀಕರ್ಕ್‌ 55; ದೀಪ್ತಿ ಶರ್ಮಾ 33ಕ್ಕೆ2). ಫಲಿತಾಂಶ: ಪಂದ್ಯ ಸ್ಥಗಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.