ADVERTISEMENT

ಹಂಗೇರಿಗೆ ಮೊದಲ ಚಿನ್ನದ ಸಂಭ್ರಮ

ಪಿಟಿಐ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಹಂಗೇರಿಯ ಶಾರ್ಟ್‌ ಟ್ರ್ಯಾಕ್‌ ಸ್ಪೀಡ್‌ ಸ್ಕೇಟರ್‌ಗಳಾದ ಸಾಬಾ ಬುರ್ಜನ್‌, ವಿಕ್ಟರ್ ನಾಚ್‌, ಸಂದೋರ್ ಲಿಯು ಶಾಲಿನ್‌ ಮತ್ತು ಶಾಂಗ್ ಲಿಯು ಚಿನ್ನ ಗೆದ್ದ ನಂತರ ಸಂಭ್ರಮಿಸಿದ ಪರಿ ರಾಯಿಟರ್ಸ್ ಚಿತ್ರ
ಹಂಗೇರಿಯ ಶಾರ್ಟ್‌ ಟ್ರ್ಯಾಕ್‌ ಸ್ಪೀಡ್‌ ಸ್ಕೇಟರ್‌ಗಳಾದ ಸಾಬಾ ಬುರ್ಜನ್‌, ವಿಕ್ಟರ್ ನಾಚ್‌, ಸಂದೋರ್ ಲಿಯು ಶಾಲಿನ್‌ ಮತ್ತು ಶಾಂಗ್ ಲಿಯು ಚಿನ್ನ ಗೆದ್ದ ನಂತರ ಸಂಭ್ರಮಿಸಿದ ಪರಿ ರಾಯಿಟರ್ಸ್ ಚಿತ್ರ   

ಗಾಂಗ್ ನುವಾಂಗ್‌ (ಎಎಫ್‌ಪಿ): ಹಂಗೇರಿಯ ಶಾರ್ಟ್‌ ಟ್ರ್ಯಾಕ್‌ ಸ್ಪೀಡ್‌ ಸ್ಕೇಟರ್‌ಗಳು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದರು. ಗುರುವಾರ ನಡೆದ ಐದು ಸಾವಿರ ಮೀಟರ್ಸ್‌ ರಿಲೆ ಸ್ಪರ್ಧೆಯಲ್ಲಿ ದಾಖಲೆಯ 6ನಿಮಿಷ, 31.971 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ತಂಡ ಚೀನಾವನ್ನು ಹಿಂದಿಕ್ಕಿತು. ಕೆನಡಾ ಕಂಚಿನ ಪದಕ ಗಳಿಸಿತು.

ಸಾಬಾ ಬುರ್ಜನ್‌, ವಿಕ್ಟರ್ ನಾಚ್‌, ಸಂದೋರ್ ಲಿಯು ಶಾಲಿನ್‌ ಮತ್ತು ಶಾಂಗ್ ಲಿಯು ಅವರು ದಾಖಲೆಯ ಚಿನ್ನ ಗೆದ್ದು ಕುಣಿದು ಕುಪ್ಪಳಿಸಿದರು. ದೇಶದ ಧ್ವಜ ಹಿಡಿದು ಸ್ಕೇಟಿಂಗ್ ರಿಂಕ್‌ಗೆ ಸುತ್ತು ಹಾಕಿದ ಅವರು ನೆರವು ಸಿಬ್ಬಂದಿಯನ್ನು ತಬ್ಬಿ ಸಂತಸ ಹಂಚಿಕೊಂಡರು.

ನ್ಯೂಜಿಲೆಂಡ್‌ಗೆ ಪದಕ: ನ್ಯೂಜಿಲೆಂಡ್‌ ಸ್ಕೀಯಿಂಗ್‌ ತಂಡದವರು 26 ವರ್ಷಗಳ ಪದಕದ ಬರವನ್ನು ನೀಗಿಸಿದರು. ಸ್ನೋ ಬೋರ್ಡ್‌ ಮತ್ತು ಫ್ರೀಸ್ಟೈಲ್‌ ಸ್ಕೀಯಿಂಗ್‌ನಲ್ಲಿ ಈ ತಂಡ ಕಂಚಿನ ಪದಕ ಗೆದ್ದಿತು. ಅಮೆರಿಕದ ಮಹಿಳಾ ಹಾಕಿ ತಂಡದವರು 20 ವರ್ಷಗಳ ನಂತರ ಚಿನ್ನ ಗೆದ್ದು ಬೀಗಿದರು. ಫೈನಲ್‌ನಲ್ಲಿ ಈ ತಂಡದವರು ಕೆನಡಾ ತಂಡವನ್ನು 3–2 ಗೋಲುಗಳಿಂದ ಮಣಿಸಿದರು.

ADVERTISEMENT

ಪದಕ ಹಿಂದಿರುಗಿಸಿದ ಕರ್ಲರ್‌: ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದಾಗಿ ಒಪ್ಪಿಕೊಂಡ ರಷ್ಯಾದ ಕರ್ಲಿಂಗ್ ಪಟು ಅಲೆಕ್ಸಾಂಡರ್‌ ಕ್ರುಷೆಲ್‌ನಿಸ್ಕಿ ಪದಕ ವಾಪಸ್ ನೀಡಿದ್ದಾರೆ ಎಂದು ಕ್ರೀಡಾ ನ್ಯಾಯಾಲಯ ತಿಳಿಸಿದೆ.

‘ಮದ್ದು ಸೇವಿಸಿ ಸ್ಪರ್ಧೆ ಯಲ್ಲಿ ಪಾಲ್ಗೊಂಡಿರುವುದಾಗಿ ಅಲೆಕ್ಸಾಂಡರ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಮಿಶ್ರ ಡಬಲ್ಸ್‌ ವಿಭಾಗದ ಸ್ಪರ್ಧೆಯಿಂದ ಅನರ್ಹ ಗೊಳಿಸಲಾಗಿದೆ. ಅನರ್ಹಗೊಳಿಸಿದ್ದನ್ನು ಅವರು ಪ್ರತಿಭಟಿಸಿದ್ದು ಮೂರ್ಖತನ’ ಎಂದು ನ್ಯಾಯಾಲಯ ಅಭಿಪ್ರಾಯ
ಪಟ್ಟಿದೆ.

ಬಿಯರ್ ಕುಡಿದು ಚಿನ್ನ ಗೆಲ್ಲುವ ಅಥ್ಲೀಟ್‌ಗಳು

ಆಲ್ಕೊಹಾಲ್‌ ಅಂಶ ಇಲ್ಲದ ಬಿಯರ್‌ ಮೊಗೆದು ಕುಡಿಯುವುದೇ ಜರ್ಮನಿ ಅಥ್ಲೀಟ್‌ಗಳ ಗೆಲುವಿನ ಗುಟ್ಟು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

‘ತರಬೇತಿಯ ನಂತರ ಅಥವಾ ಸ್ಪರ್ಧೆಗೂ ಮುನ್ನ ಬಿಯರ್ ಕುಡಿಯುವುದರಿಂದ ಉತ್ಸಾಹ ತುಂಬುತ್ತದೆ’ ಎಂದು ಭಾನುವಾರ ಮಾಸ್‌ ಸ್ಟಾರ್ಟ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಶೆಂಪ್‌ ಹೇಳಿದರು. ಜರ್ಮನಿ ತಂಡದ ವೈದ್ಯ ಜೊಹಾನ್ಸ್ ಶೆರ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

***

ಅಮಲು ಇಲ್ಲದ ಬಿಯರ್‌ ಮೊಗೆದು ಕುಡಿಯುವುದೇ ಜರ್ಮನಿ ಅಥ್ಲೀಟ್‌ಗಳ ಗೆಲುವಿನ ಗುಟ್ಟು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

‘ತರಬೇತಿಯ ನಂತರ ಅಥವಾ ಸ್ಪರ್ಧೆಗೂ ಮುನ್ನ ಬಿಯರ್ ಕುಡಿಯುವುದರಿಂದ ಉತ್ಸಾಹ ತುಂಬುತ್ತದೆ’ ಎಂದು
ಭಾನುವಾರ ಮಾಸ್‌ ಸ್ಟಾರ್ಟ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಶೆಂಪ್‌ ಹೇಳಿದರು.

ಜರ್ಮನಿ ತಂಡದ ವೈದ್ಯ ಜೊಹಾನ್ಸ್ ಶೆರ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.