ADVERTISEMENT

ಬಿಎಫ್‌ಸಿ ಜೊತೆ ಮ್ಯಾನುಯೆಲ್‌ ಒಪ್ಪಂದ

ಪಿಟಿಐ
Published 17 ಜುಲೈ 2019, 19:01 IST
Last Updated 17 ಜುಲೈ 2019, 19:01 IST
ಮ್ಯಾನುಯೆಲ್‌ ಒನ್ವು ವಿಲ್‌ಫ್ರಾಂಕಾ
ಮ್ಯಾನುಯೆಲ್‌ ಒನ್ವು ವಿಲ್‌ಫ್ರಾಂಕಾ   

ಬೆಂಗಳೂರು: ಸ್ಪೇನ್‌ ಆಟಗಾರ ಮ್ಯಾನುಯೆಲ್‌ ಒನ್ವು ವಿಲ್‌ಫ್ರಾಂಕಾ ಅವರು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಜೊತೆ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

2019–20ರ ಸಾಲಿಗೆ ತಂಡದ ಪರ ಅವರು ಕಣಕ್ಕಿಳಿಯಲಿದ್ದಾರೆ ಎಂದು ಕ್ಲಬ್‌ ಬುಧವಾರ ಘೋಷಿಸಿದೆ.

31 ವರ್ಷದ ಮ್ಯಾನುಯೆಲ್ ಬಿಎಫ್‌ಸಿ ತಂಡದ ಪರ ಆಡಲಿರುವ ಸ್ಪೇನ್‌ನ13ನೇ ಆಟಗಾರ. ಅವರ ಒಪ್ಪಂದವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸುವ ಆಯ್ಕೆಯನ್ನು ಕ್ಲಬ್‌ ಹೊಂದಿದೆ.

ADVERTISEMENT

ಸ್ಪೇನ್‌ನ ಟ್ಯುಡೆಲಾದಲ್ಲಿ ಜನಿಸಿರುವ ಮ್ಯಾನುಯೆಲ್‌, ಸ್ಪೇನ್‌ನ ಅಟ್ಲೆಟಿಕೊ ವಾಲ್ಟೆರಾನೊ ಹಾಗೂ ಸಿ ಡಿ ಟ್ಯುಡೆಲಾನೊ ತಂಡಗಳ ಪರ ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.