ADVERTISEMENT

ಕಿವೀಸ್‌ಗೆ ಗೆಲುವಿನ ವಿಶ್ವಾಸ

ಏಜೆನ್ಸೀಸ್
Published 21 ಆಗಸ್ಟ್ 2019, 20:15 IST
Last Updated 21 ಆಗಸ್ಟ್ 2019, 20:15 IST

ಕೊಲಂಬೊ: ಇಲ್ಲಿನ ಓವಲ್‌ ಕ್ರೀಡಾಂಗಣ ತವರಾಗಿದ್ದರೂ, ಇಲ್ಲಿ ಶ್ರೀಲಂಕಾ ತಂಡದ ಸಾಧನೆ ಅಷ್ಟೇನೂ ಉತ್ತಮವಾಗಿಲ್ಲ. ಗುರುವಾರ ಆರಂಭವಾಗುವ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಈ ಅಂಶ ಅನುಕೂಲಕರವಾಗಬಹುದೆಂಬ ಆಶಯದಿಂದ ನ್ಯೂಜಿಲೆಂಡ್‌ ಕಣಕ್ಕಿಳಿಯಲಿದೆ.

ಗಾಲ್‌ ಕ್ರೀಡಾಂಗಣ ಸ್ಪಿನ್ನರ್‌ಗಳಿಗೆ ಸ್ನೇಹಿಯಾಗಿದ್ದರೆ, ಸಿಂಹಳ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣ ಬ್ಯಾಟ್ಸಮನ್ನರ ಮಿತ್ರ. ಆದರೆ ಓವಲ್‌ ಕ್ರೀಡಾಂಗಣ ಸೀಮ್‌ ಬೌಲರ್‌ಗಳಿಗೆ ಪ್ರಶಸ್ತವಾಗಿದೆ. ಕ್ರಿಕೆಟ್‌ ದಂತಕತೆ ಡಾನ್‌ ಬ್ರಾಡ್ಮನ್‌ ಆಡಿರುವ ಏಷ್ಯಾದ ಏಕೈಕ ಕ್ರೀಡಾಂಗಣ ಇದು.

ಶ್ರೀಲಂಕಾ ಮೊದಲ ಟೆಸ್ಟ್‌ ಗೆದ್ದುಕೊಂಡಿತ್ತು.

ADVERTISEMENT

ಗುಣಮಟ್ಟದ ಬೌಲಿಂಗ್‌ ಎದುರು ಲಂಕನ್ನರು ಈ ಕ್ರೀಡಾಂಗಣದಲ್ಲಿ ಪರದಾಡಿದ್ದಾರೆ. ಕಿವೀಸ್‌ ತಂಡ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ ಅವರಂಥ ಅನುಭವಿಗಳನ್ನು ಹೊಂದಿದ್ದು, ಉತ್ತಮ ಬೌಲಿಂಗ್‌ ‌ಪ್ರದರ್ಶನದ ವಿಶ್ವಾಸದಲ್ಲಿದೆ. ಎಡಗೈ ವೇಗಿ ನೀಲ್‌ ವ್ಯಾಗ್ನರ್‌ ಕೂಡ ಆಡುವ ನಿರೀಕ್ಷೆಯಿದೆ.

ಈ ಕ್ರೀಡಾಂಗಣದಲ್ಲಿ ಕಳೆದ 10 ವರ್ಷಗಳಲ್ಲಿ ಆಡಿರುವ ಏಳು ಟೆಸ್ಟ್‌ ಪಂದ್ಯಗಳಲ್ಲಿ ಶ್ರೀಲಂಕಾ ಐದನ್ನು ಸೋತಿದೆ.

ಸೌಥಿ, ಬೌಲ್ಟ್ ಕೂಡ ಇಲ್ಲಿ ಹಿಂದೆ ಆಡಿದ್ದಾಗ ಉತ್ತಮ ಯಶಸ್ಸು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.