ADVERTISEMENT

ಐಪಿಎಲ್‌ಗೆ ಅಮೆರಿಕ ಆಟಗಾರ ಅಲಿ ಖಾನ್

ಪಿಟಿಐ
Published 12 ಸೆಪ್ಟೆಂಬರ್ 2020, 11:13 IST
Last Updated 12 ಸೆಪ್ಟೆಂಬರ್ 2020, 11:13 IST
ಕೋಲ್ಕತ್ತ ನೈಟ್ ರೈಡರ್ಸ್ –ಪಿಟಿಐ ಚಿತ್ರ
ಕೋಲ್ಕತ್ತ ನೈಟ್ ರೈಡರ್ಸ್ –ಪಿಟಿಐ ಚಿತ್ರ   

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಬಾರಿ ಅಮೆರಿಕ ಆಟಗಾರನನ್ನು ಕಣಕ್ಕೆ ಇಳಿಸಲು ವೇದಿಕೆ ಸಜ್ಜುಗೊಳ್ಳುತ್ತಿದೆ. ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಇಂಗ್ಲೆಂಡ್‌ನ ಹ್ಯಾರಿ ಗರ್ನಿ ಬದಲಿಗೆ ಅಮೆರಿಕದ ವೇಗಿ ಅಲಿ ಖಾನ್ ಅವರನ್ನು ಸೇರಿಸಿಕೊಳ್ಳಲು ಮುಂದಾಗಿದ್ದು ಐಪಿಎಲ್ ಆಡಳಿತದ ಅನುಮತಿಗಾಗಿ ಕಾಯುತ್ತಿದೆ.

ಭುಜದಲ್ಲಿ ನೋವು ಕಾಣಿಸಿಕೊಂಡಿರುವ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಗರ್ನಿ ಕಳೆದ ತಿಂಗಳಲ್ಲಿ ನಡೆದಿದ್ದ ಸರಣಿಗಳ ಸಂದರ್ಭದಲ್ಲಿಇಂಗ್ಲೆಂಡ್ ತಂಡದಲ್ಲೂ ಆ ನಂತರಐಪಿಎಲ್‌ನಲ್ಲೂಆಡದೇ ಇರಲು ನಿರ್ಧರಿಸಿದ್ದಾರೆ.

ಗುರುವಾರ ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಪ್ರಶಸ್ತಿ ಗೆದ್ದ ಟ್ರಿನ್‌ಬಾಗೊ ನೈಟ್‌ ರೈಡರ್ಸ್ ತಂಡದಲ್ಲಿ ಆಡಿದ್ದ ಖಾನ್ ಎಂಟು ವಿಕೆಟ್ ಉರುಳಿಸಿದ್ದರು. ಕೋಲ್ಕತ್ತ ನೈಟ್ ರೈಡರ್ಸ್ ಕಳೆದ ಬಾರಿಯೇ ಅವರ ಮೇಲೆ ಕಣ್ಣಿಟ್ಟಿತ್ತು. ಆದರೆಒಪ್ಪಂದ ಮಾಡಿಕೊಳ್ಳಲು ಆಗಿರಲಿಲ್ಲ.

ADVERTISEMENT

2018ರಲ್ಲಿ ನಡೆದ ಗ್ಲೋಬಲ್ ಟಿ20 ಕೆನಡಾ ಟೂರ್ನಿಯಲ್ಲಿ ಖಾನ್‌ ಅವರ ಪ್ರತಿಭೆ ಕ್ರಿಕೆಟ್ ಲೋಕ ಗುರುತಿಸಿತ್ತು. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೊ ಅಲ್ಲಿಂದ ಅವರನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ ಕರೆದುಕೊಂಡು ಬಂದರು. ಆ ವರ್ಷ ಗಯಾನ ಅಮಜಾನ್ ವಾರಿಯರ್ಸ್ ಪರವಾಗಿ ಕಣಕ್ಕೆ ಇಳಿದಿದ್ದ ಅವರು 12 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಅತಿಹೆಚ್ಚು ವಿಕೆಟ್ ಪಡೆದ ಎರಡನೇ ವೇಗದ ಬೌಲರ್ ಎನಿಸಿದ್ದರು. ‌

2015ರಲ್ಲಿ ರಾಜಸ್ತಾನರಾಯಲ್ಸ್ ತಂಡದಲ್ಲಿ ಆಡಿದ್ದ ರಸ್ಟಿ ಥೆರಾನ್ ಈಗ ಅಮೆರಿಕ ಪರವಾಗಿ ಆಡುತ್ತಿದ್ದಾರೆ. ಅವರು 2010 ಮತ್ತು 2011ರಲ್ಲಿ ಕ್ರಮವಾಗಿ ಡೆಕ್ಕನ್ ಚಾರ್ಜರ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳಲ್ಲಿ ಆಡಿದ್ದರು. ಆದರೆ ಅವರು ಮೂಲತಃ ದಕ್ಷಿಣ ಆಫ್ರಿಕಾದವರಾಗಿದ್ದು 2019ರಲ್ಲಿ ಅಮೆರಿಕಕ್ಕೆ ತೆರಳಿದ್ದರು.

ಪರಿಣಾಮಕಾರಿ ಯಾರ್ಕರ್ ಎಸೆತಗಳನ್ನು ಹಾಕಬಲ್ಲ ಖಾನ್ ತಾಸಿಗೆ 140 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡ 13ನೇ ಆವೃತ್ತಿಯ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಸೆಪ್ಟೆಂಬರ್ 23ರಂದು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.