ADVERTISEMENT

35 ರನ್ ಗಳಿಗೆ ಆಲೌಟ್ ಆದ ಯುಎಸ್ಎ: 17.2 ಓವರ್‌ಗಳಲ್ಲೇ ಮುಗಿಯಿತು ಏಕದಿನ ಪಂದ್ಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 7:59 IST
Last Updated 12 ಫೆಬ್ರುವರಿ 2020, 7:59 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಕಿರ್ತಿಪುರ್ (ನೇಪಾಳ):ಇಲ್ಲಿನ ತ್ರಿಭುವನ್‌ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಆತಿಥೇಯ ನೇಪಾಳ ಮತ್ತು ಯುಎಸ್ಎ ತಂಡಗಳ ನಡುವೆಏಕದಿನ ಪಂದ್ಯವು ಕೇವಲ 17.2ನೇ ಓವರ್‌ನಲ್ಲಿ ಮುಕ್ತಾಯವಾಯಿತು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಓವರ್‌ಗಳಲ್ಲಿ ಮುಕ್ತಾಯವಾದ ಪಂದ್ಯ ಎನಿಸಿಕೊಂಡಿತು.

ವಿಶ್ವಕಪ್‌ ಅರ್ಹತಾ ಸುತ್ತಿನ ಲೀಗ್‌ ಹಂತದ ಪಂದ್ಯ ಇದಾಗಿದ್ದು, ಟಾಸ್‌ ಗೆದ್ದ ನೇಪಾಳ ಯುಎಸ್‌ಎಗೆ ಬ್ಯಾಟಿಂಗ್ ಬಿಟ್ಟುಕೊಟ್ಟಿತು.

ಇನಿಂಗ್ಸ್‌ ಆರಂಭಿಸಿದಯುಎಸ್‌ಎ ಕೇವಲ 35 ರನ್‌ಗಳಿಗೆ ಆಲೌಟ್‌ ಆಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಕ್ಸೇವಿಯರ್ ಮಾರ್ಷಲ್‌ (16) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮನ್‌ ಎರಡಂಕಿ ಮುಟ್ಟಲಿಲ್ಲ. ಈ ತಂಡದ ನಾಲ್ವರು ಸೊನ್ನೆ ಸುತ್ತಿದರು. ನೇಪಾಳದ ಸಂದೀಪ್‌ ಲಾಮಿಚಾನೆ 16 ರನ್ ನೀಡಿ 6 ವಿಕೆಟ್‌ ಉರುಳಿಸಿದರು. ಸುಶಾನ್‌ ಭರಿ 5 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ADVERTISEMENT

ಇದರೊಂದಿಗೆಏಕದಿನ ಕ್ರಿಕೆಟ್‌ನಲ್ಲಿ ಎದುರಾಳಿ ತಂಡವನ್ನುಕೇವಲ 12 ಓವರ್‌ಗಳಲ್ಲಿ ಕಟ್ಟಿ ಹಾಕಿದ ಶ್ರೇಯಕ್ಕೆ ನೇಪಾಳ ಭಾಜನವಾಯಿತು. ಯುಎಸ್‌ಎ ಗುರಿಯನ್ನು ನೇಪಾಳ ಕೇವಲ 5.2 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ತಲುಪಿತು.

ಅತಿ ಕಡಿಮೆ ಮೊತ್ತ
ಯುಎಸ್‌ಎ ಕಲೆಹಾಕಿದ ಮೊತ್ತ ಏಕದಿನ ಕ್ರಿಕೆಟ್‌ನ ಅತ್ಯಂತ ಕನಿಷ್ಠ ಮೊತ್ತ ಎನಿಸಿತು. ಈ ಹಿಂದೆ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ ತಂಡವೂ ಇಷ್ಟೇ ರನ್ ಗಳಿಸಿ ಆಲೌಟ್‌ ಆಗಿತ್ತು. ನಂತರ ಸ್ಥಾನಗಳಲ್ಲಿ ಕೆನಡಾ (36), ಜಿಂಬಾಬ್ವೆ (38) ಮತ್ತು ಶ್ರೀಲಂಕಾ (43) ತಂಡಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.