ADVERTISEMENT

ಅರ್ಜುನ್‌ ತೆಂಡೂಲ್ಕರ್‌ ಮಿಂಚು

ಮುಂಬೈ ಟ್ವೆಂಟಿ–20 ಲೀಗ್‌

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:13 IST
Last Updated 14 ಮೇ 2019, 20:13 IST
ಅರ್ಜುನ್‌ ತೆಂಡೂಲ್ಕರ್‌
ಅರ್ಜುನ್‌ ತೆಂಡೂಲ್ಕರ್‌   

ಮುಂಬೈ (ಪಿಟಿಐ) : ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ಅವರು ಆಲ್‌ರೌಂಡ್‌ ಪ್ರದ ರ್ಶನದ ಮೂಲಕ ಗಮನಸೆಳೆದರು. ಮುಂಬೈಟ್ವೆಂಟಿ–20 ಲೀಗ್‌ನ ಉದ್ಘಾ ಟನಾ ಪಂದ್ಯದಲ್ಲಿ ಅರ್ಜುನ್‌ ಪ್ರತಿನಿಧಿಸಿದ್ದ ಆಕಾಶ್‌ ಟೈಗರ್ಸ್‌ ಮುಂಬೈ ವೆಸ್ಟ್‌ರ್ನ್‌ ಸಬರ್ಬ್‌ ತಂಡವು ಟ್ರಂಪ್‌ ನೈಟ್‌ ಮುಂಬೈ ನಾರ್ಥ್‌ ಈಸ್ಟ್‌ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿತು.

ಒಂದು ವಿಕೆಟ್‌ ಪಡೆದುದಲ್ಲದೆ 23 ರನ್‌ ಗಳಿಸಿ ಅರ್ಜುನ್‌ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಟ್ರಂಪ್‌ ನೈಟ್ಸ್‌ ತಂಡವನ್ನು ಆಕಾಶ್‌ ಟೈಗರ್ಸ್‌ ತಂಡ 147ಕ್ಕೆ ನಿಯಂತ್ರಿ ಸಿತು.ನೈಟ್ಸ್‌ ತಂಡದ ನಾಯಕ ಸೂರ್ಯ ಕುಮಾರ್‌ ಯಾದವ್‌ (ಅಜೇಯ 90, 56 ಎಸೆತ, ನಾಲ್ಕು ಬೌಂಡರಿ, ಏಳು ಸಿಕ್ಸರ್‌) ಶತಕವಂಚಿತರಾದರು.

ADVERTISEMENT

ಆ ಬಳಿಕ ಬ್ಯಾಟಿಂಗ್‌ಗೆ ಇಳಿದ ಆಕಾಶ್‌ ಟೈಗರ್ಸ್‌ ತಂಡವು ಮೂರು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ತೋರಣ ಕಟ್ಟಿತು. ಅರ್ಜುನ್‌ 23 ರನ್‌ ಗಳಿಸಲು 19 ಎಸೆತಗಳನ್ನು ತೆಗೆದುಕೊಂಡರು.

ಸಂಕ್ಷಿಪ್ತ ಸ್ಕೋರ್‌: ಟ್ರಂಪ್‌ ನೈಟ್ಸ್: 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 147 (ಸೂರ್ಯಕುಮಾರ್‌ ಅಜೇಯ 90; ಎ.ಲಾಡ್‌ 12ಕ್ಕೆ 2).

ಆಕಾಶ್‌ ಟೈಗರ್ಸ್‌: 19.3 ಓವರ್‌ಗಳಲ್ಲಿ ಐದು ವಿಕೆಟ್‌ಗೆ 148 (ಆಕರ್ಷಿತ್‌ ಗೋಮೆಲ್‌ 41, ಕೌಸ್ತುಭ್‌ ಪವಾರ್‌ 34; ಕೆ.ಸಾವಂತ್‌ 30ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.