ವಿಕೆಟ್ ಪಡೆದ ಸಂಭ್ರಮದಲ್ಲಿ ರಿಷದ್ ಹೊಸೈನ್
ಕೃಪೆ: @BCBtigers
ಅಬುಧಾಬಿ: ಅಂತಿಮ ಓವರ್‌ವರೆಗೂ ತೀವ್ರ ಪೈಪೋಟಿ ಕಂಡ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 8 ರನ್‌ಗಳಿಂದ ಅಫ್ಗಾನಿಸ್ತಾನ ವಿರುದ್ಧ ಮಂಗಳವಾರ ಗೆಲುವು ಸಾಧಿಸಿತು.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 155 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ, ಮುಸ್ತಫಿಜುರ್ ರೆಹಮಾನ್ (28ಕ್ಕೆ3) ಹಾಗೂ ನಸುಮ್ ಅಹಮದ್(11ಕ್ಕೆ2) ಅವರ ಬೌಲಿಂಗ್ ಎದುರು 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.
77 ರನ್‌ಗಳಿಗೆ 5 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ಅಫ್ಗಾನ್‌ಗೆ ಅಜ್ಮತ್‌ವುಲ್ಲಾ ಒಮರ್‌ಝೈ (30; 16ಎ) ಗೆಲುವಿನ ಆಸೆ ಚಿಗುರಿಸಿದರಾದರೂ, ಪದೇಪದೆ ವಿಕೆಟ್ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದ ಆರಂಭ ಆಟಗಾರರಾದ ತಂಜಿದ್ ಹಸನ್ (52, 31ಎಸೆತ) ಮತ್ತು ಸೈಫ್ ಹಸನ್ (30) ಅವರು 6.3 ಓವರುಗಳಲ್ಲೇ 63 ರನ್ ಸೇರಿಸಿ ಮಿಂಚಿನ ಆರಂಭ ಒದಗಿಸಿದ್ದರು. 10 ಓವರುಗಳ ನಂತರ 1 ವಿಕೆಟ್‌ಗೆ 87 ರನ್ ಸೇರಿಸಿ ಉತ್ತಮ ಸ್ಥಿತಿಯಲ್ಲಿತ್ತು.
ಈ ವೇಳೆ, ನಾಯಕ ರಶೀದ್ ಖಾನ್ (26ಕ್ಕೆ2) ಮತ್ತು ಸ್ಪಿನ್ ಜೊತೆಗಾರ ನೂರ್ ಅಹ್ಮದ್ (23ಕ್ಕೆ2) ಅವರು ನಿಖರ ಮತ್ತು ವೈವಿಧ್ಯಮಯ ದಾಳಿಯಿಂದ ಬಾಂಗ್ಲಾ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಕೊನೆಯ 10 ಓವರುಗಳಲ್ಲಿ 67 ರನ್‌ಗಳನ್ನಷ್ಟೇ ಕೊಟ್ಟರು.
ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ: 20 ಓವರುಗಳಲ್ಲಿ 5ಕ್ಕೆ154 (ಸೈಫ್ ಹಸನ್ 30, ತಂಜಿದ್ ಹಸನ್ 52, ತೌಹಿದ್ ಹೃದಯ್ 26; ಅಜ್ಮತ್‌ವುಲ್ಲಾ ಒಮರ್‌ಝೈ 19ಕ್ಕೆ1, ರಶೀದ್ ಖಾನ್ 26ಕ್ಕೆ2, ನೂರ್ ಅಹ್ಮದ್ 23ಕ್ಕೆ2)
ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 146 (ರೆಹ್ಮನುಲ್ಲಾ ಗುರ್ಬಜ್ 35, ಅಜ್ಮತುಲ್ಲಾ ಒಮರ್ಝೈ 30, ಮುಸ್ತಫಿಜುರ್ ರೆಹಮಾನ್ 28ಕ್ಕೆ3, ನಸುಮ್ ಅಹಮದ್ 11ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.