ADVERTISEMENT

ಮಹಿಳಾ T20 ಕ್ರಿಕೆಟ್: ಭಾರತಕ್ಕೆ ಸೋಲು; ಕ್ಲೀನ್‌ಸ್ವೀಪ್ ಸಾಧಿಸಿದ ಆಸ್ಟ್ರೇಲಿಯಾ

ಪಿಟಿಐ
Published 11 ಆಗಸ್ಟ್ 2025, 0:36 IST
Last Updated 11 ಆಗಸ್ಟ್ 2025, 0:36 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಮೆಕೆ, ಆಸ್ಟ್ರೇಲಿಯಾ: ಸಿಯಾನಾ ಜಿಂಜರ್ (16ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ಎ ಮಹಿಳೆಯರ ಕ್ರಿಕೆಟ್‌ ತಂಡವು ಭಾರತ ಎ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿತು. ಇದರೊಂದಿಗೆ ಮೂರು ಟಿ20 ಪಂದ್ಯಗಳ ಸರಣಿ ಯನ್ನು 3–0ಯಿಂದ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತು. 

ADVERTISEMENT

ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ತಂಡವು 8 ವಿಕೆಟ್‌ಗೆ 144 ರನ್‌ ಗಳಿಸಿತು. ಭಾರತದ ಪರ ರಾಧಾ ಯಾದವ್‌ ಮತ್ತು ಪ್ರೇಮಾ ರಾವತ್‌ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 8 ವಿಕೆಟ್‌ಗೆ 140 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. 

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ ಎ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 144 (ಎಲಿಸಾ ಹೇಲಿ 27, ಮ್ಯಾಡೆಲಿನ್ ಪೆನ್ನಾ 39; ರಾಧಾ ಯಾದವ್‌ 31ಕ್ಕೆ 3, ಪ್ರೇಮಾ ರಾವತ್‌ 24ಕ್ಕೆ 3). ಭಾರತ ಎ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 140 (ಶಫಾಲಿ ವರ್ಮಾ 41, ಮಿನ್ನು ಮಣಿ 30; ಸಿಯಾನಾ ಜಿಂಜರ್ 16ಕ್ಕೆ 4). ಫಲಿತಾಂಶ: ಆಸ್ಟ್ರೇಲಿಯಾ ಎ ತಂಡಕ್ಕೆ 4 ರನ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.