ADVERTISEMENT

ಕ್ರಿಕೆಟ್‌: ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

ಏಜೆನ್ಸೀಸ್
Published 8 ಸೆಪ್ಟೆಂಬರ್ 2022, 14:00 IST
Last Updated 8 ಸೆಪ್ಟೆಂಬರ್ 2022, 14:00 IST
ಆ್ಯಡಮ್‌ ಜಂಪಾ ಅವರನ್ನು ಸಹ ಆಟಗಾರ ಅಭಿನಂದಿಸಿದರು –ಎಎಫ್‌ಪಿ ಚಿತ್ರ
ಆ್ಯಡಮ್‌ ಜಂಪಾ ಅವರನ್ನು ಸಹ ಆಟಗಾರ ಅಭಿನಂದಿಸಿದರು –ಎಎಫ್‌ಪಿ ಚಿತ್ರ   

ಕೇನ್ಸ್‌, ಆಸ್ಟ್ರೇಲಿಯಾ: ಆ್ಯಡಮ್‌ ಜಂಪಾ (35ಕ್ಕೆ 5) ಅವರ ಚುರುಕಿನ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 113 ರನ್‌ಗಳಿಂದ ಮಣಿಸಿತು.

ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ 2–0 ರಲ್ಲಿ ತನ್ನದಾಗಿಸಿಕೊಂಡಿತು.

ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 195 ರನ್‌ ಗಳಿಸಿದರೆ, ನ್ಯೂಜಿಲೆಂಡ್‌ 33 ಓವರ್‌ಗಳಲ್ಲಿ ಕೇವಲ 82 ರನ್‌ಗಳಿಗೆ ಆಲೌಟಾಯಿತು. ಲೆಗ್‌ಸ್ಪಿನ್ನರ್‌ ಜಂಪಾ ಅವರ ಕೈಚಳಕದ ಮುಂದೆ ಕಿವೀಸ್‌ ತಂಡ ನಲುಗಿತು. 17 ರನ್‌ ಗಳಿಸಿದ ನಾಯಕ ಕೇನ್‌ ವಿಲಿಯಮ್ಸನ್‌ ‘ಟಾಪ್‌ ಸ್ಕೋರರ್‌’ ಎನಿಸಿಕೊಂಡರು.

ADVERTISEMENT

ಆತಿಥೇಯ ತಂಡದ ಪರ ಸ್ಟೀವನ್‌ ಸ್ಮಿತ್‌ 61 ರನ್‌ (94 ಎಸೆತ) ಗಳಿಸಿದರೆ, ಮಿಚೆಲ್‌ ಸ್ಟಾರ್ಕ್‌ 38 ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ 25 ರನ್‌ ಕಲೆಹಾಕಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9ಕ್ಕೆ 195 (ಸ್ಟೀವನ್‌ ಸ್ಮಿತ್‌ 61, ಗ್ಲೆನ್‌ ಮ್ಯಾಕ್ಸ್‌ವೆಲ್‌ 25, ಮಿಚೆಲ್‌ ಸ್ಟಾರ್ಕ್‌ ಔಟಾಗದೆ 38, ಟ್ರೆಂಟ್‌ ಬೌಲ್ಟ್‌ 38ಕ್ಕೆ 4, ಮ್ಯಾಟ್‌ ಹೆನ್ರಿ 33ಕ್ಕೆ 3) ನ್ಯೂಜಿಲೆಂಡ್‌ 33 ಓವರ್‌ಗಳಲ್ಲಿ 82 (ಕೇನ್‌ ವಿಲಿಯಮ್ಸನ್ 16, ಮಿಚೆಲ್‌ ಸ್ಯಾಂಟ್ನೆರ್‌ ಔಟಾಗದೆ 16, ಆ್ಯಡಮ್‌ ಜಂಪಾ 35ಕ್ಕೆ 5, ಸೀನ್‌ ಅಬಾಟ್‌ 1ಕ್ಕೆ 2, ಮಿಚೆಲ್‌ ಸ್ಟಾರ್ಕ್‌ 12ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 113 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.