ಮೆಲ್ಬರ್ನ್: ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ಆಟಗಾರ ನಿಕ್ ಮ್ಯಾಡಿಸನ್ ಅವರು ಈ ವರ್ಷದ ಆರಂಭದಲ್ಲಿ ವೃಷಣದ ಕ್ಯಾನ್ಸರ್‌ಗೆ ಒಳಗಾಗಿದ್ದನ್ನು ಬಹಿರಂಗಪಡಿಸಿದ್ದಾರೆ. ಕಿಮೊಥೆರಪಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ವೃತ್ತಿಜೀವನ ಮುಂದುವರಿಸಲು ಸಜ್ಜಾಗಿದ್ದಾರೆ.
33 ವರ್ಷ ವಯಸ್ಸಿನ ಮ್ಯಾಡಿಸನ್ ಮೂರು ಟೆಸ್ಟ್ ಪಂದ್ಯಗಳು ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರನ್ನು ಮಾರ್ಚ್‌ನಲ್ಲಿ ನ್ಯೂಸೌತ್ ವೇಲ್ಸ್ ತಂಡದಿಂದ ಕೈಬಿಡಲಾಗಿತ್ತು. ನಂತರ ಅವರು ಚಿಕಿತ್ಸೆಗೆ ಒಳಗಾಗಿದ್ದರು.
‘ನಾನು ಕಿಮೊಕ್ಕೆ ಒಳಗಾಗಬೇಕೆಂದು ಗೊತ್ತಾದಾಗ ಅರಗಿಸಿಕೊಳ್ಳುವುದು ಕಷ್ಟವಾಯಿತು. ಕ್ಯಾನ್ಸರ್ ಅಷ್ಟರಲ್ಲೇ ಹೊಟ್ಟೆಯ ದುಗ್ಧರಸ, ಶ್ವಾಸಕೋಶದ ಕೆಲಭಾಗಗಳಿಗೆ ಹರಡಿತ್ತು. ನಿದ್ದೆಯೂ ಹತ್ತುತ್ತಿರಲಿಲ್ಲ. ಎರಡು– ಮೂರು ವಾರಗಳಲ್ಲಿ ಎಲ್ಲ ಕೂದಲು ಕಳೆದುಕೊಂಡೆ. ಒಂಬತ್ತು ವಾರ ನಾನು ನರಕಯಾತನೆ ಅನುಭವಿಸಿದೆ’ ಎಂದು ನೆನಪಿಸಿಕೊಂಡರು. ಅಡ್ಡ ಪರಿಣಾಮ ತಪ್ಪಿಸಲು ನಾನು ಸ್ಟಿರಾಯಿಡ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಇದರಿಂದ ನಿದ್ದೆಗೆ ಸಮಸ್ಯೆಯಾಯಿತು ಎಂದರು.
ಎಡಗೈ ಬ್ಯಾಟರ್ ಮ್ಯಾಡಿಸನ್ 2014–15ರ ಅವಧಿಯಲ್ಲಿ ಆರ್‌ಸಿಬಿಗೆ ಮೂರು ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.