ADVERTISEMENT

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌: ಬಾಂಗ್ಲಾದೇಶಕ್ಕೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 16:17 IST
Last Updated 20 ಜೂನ್ 2025, 16:17 IST
<div class="paragraphs"><p>ಬಾಂಗ್ಲಾದೇಶ ತಂಡದ ಮುಷ್ಫಿಕುರ್ ರಹೀಮ್ </p></div>

ಬಾಂಗ್ಲಾದೇಶ ತಂಡದ ಮುಷ್ಫಿಕುರ್ ರಹೀಮ್

   

ಚಿತ್ರಕೃಪೆ: Facebook / Bangladesh Cricket

ಗಾಲೆ (ಶ್ರೀಲಂಕಾ), (ಎಎಫ್‌ಪಿ): ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಮೇಲುಗೈ ಸಾಧಿಸಿತು. ಶ್ರೀಲಂಕಾ ವಿರುದ್ಧ ಕೇವಲ 10 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾದ ಪ್ರವಾಸಿ ತಂಡ ಶುಕ್ರವಾರ ದಿನದಾಟ ಮುಗಿದಾಗ 3 ವಿಕೆಟ್‌ಗೆ 177 ರನ್ ಗಳಿಸಿದೆ.

ADVERTISEMENT

ಒಟ್ಟಾರೆ ಮುನ್ನಡೆ 187 ರನ್‌ಗಳಿಗೆ ಹೆಚ್ಚಿಸಿದೆ. ಶಾದ್ಮನ್ ಇಸ್ಲಾಂ (76) ಮತ್ತು ನಾಯಕ ನಜ್ಮುಲ್ ಹುಸೇನ್ ಶಾಂತೊ (ಔಟಾಗದೇ 56) ಅವರು ಮೂರನೇ ವಿಕೆಟ್‌ಗೆ 68 ರಮ್ ಸೇರಿಸಿ ತಂಡ ಕುಸಿಯದಂತೆ ನೋಡಿಕೊಂಡರು.

‌ಇದಕ್ಕೆ ಮೊದಲು, ಬಾಂಗ್ಲಾದೇಶದ 495 ರನ್‌ಗಳಿಗೆ ಉತ್ತರವಾಗಿ ಗುರುವಾರ 4 ವಿಕೆಟ್‌ಗೆ 368 ರನ್ ಗಳಿಸಿದ್ದ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 485 ರನ್‌ಗಳಿಗೆ ಆಲೌಟ್‌ ಆಯಿತು. ಒಂದು ಹಂತದಲ್ಲಿ 6 ವಿಕೆಟ್‌ಗೆ 470 ರನ್ ಗಳಿಸಿದ್ದ ಲಂಕಾ 15 ರನ್ ಅಂತರದಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಕಮಿಂದು ಮೆಂಡಿಸ್‌ (87) ಮತ್ತು ಮಿಲನ್ ರತ್ನಾಯಕೆ (39) ಏಳನೇ ವಿಕೆಟ್‌ಗೆ 84 ರನ್ ಸೇರಿಸಿದ್ದರು.

ಸಂಕ್ಷಿಪ್ತ ಸ್ಕೋರು

* ಮೊದಲ ಇನಿಂಗ್ಸ್‌

ಬಾಂಗ್ಲಾದೇಶ: 495

ಶ್ರೀಲಂಕಾ: 131.2 ಓವರುಗಳಲ್ಲಿ 485 (ಕಮಿಂದು ಮೆಂಡಿಸ್‌ 87, ಮಿಲನ್ ರತ್ನಾಯಕೆ 39; ನಯೀಮ್ ಹಸನ್ 121ಕ್ಕೆ5, ಹಸನ್ ಮಹಮುದ್‌ 74ಕ್ಕೆ3)

* ಎರಡನೇ ಇನಿಂಗ್ಸ್‌

ಬಾಂಗ್ಲಾದೇಶ: 57 ಓವರುಗಳಲ್ಲಿ 3ಕ್ಕೆ177 (ಶಾದ್ಮನ್ ಇಸ್ಲಾಂ 76, ನಜ್ಮುಲ್ ಹುಸೇನ್ ಶಾಂತೊ ಬ್ಯಾಟಿಂಗ್ 56, ಮುಷ್ಫಿಕುರ್ ರಹೀಮ್ ಬ್ಯಾಟಿಂಗ್ 22).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.