
ಪ್ರಜಾವಾಣಿ ವಾರ್ತೆ
ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರು ಸತತ ಮೂರನೇ ಅವಧಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ (ಎಸಿಸಿ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಬಾಲಿಯಲ್ಲಿ ಬುಧವಾರ ನಡೆದ ಎಸಿಸಿ ವಾರ್ಷಿಕ ಮಹಾಸಭೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವ ಅವರು ಶಾ ಅವರ ಅವಧಿ ಮುಂದುವರಿಸಲು ಪ್ರಸ್ತಾವ ಮಂಡಿಸಿದರು. ಇದನ್ನು ಎಸಿಸಿ ಸದಸ್ಯರು ಸರ್ನಾನುಮತದಿಂದ ಅನುಮೋದಿಸಿದರು. 2021 ರಲ್ಲಿ ನಜ್ಮುಲ್ ಹಸನ್ ಅವರ ಉತ್ತರಾಧಿಕಾರಿಯಾಗಿ ಶಾ ಮೊದಲ ಬಾರಿ ಆಯ್ಕೆಯಾಗಿದ್ದರು.
ಶಾ ಅವಧಿಯಲ್ಲಿ ಎಸಿಸಿಯು ಏಷ್ಯಾ ಕಪ್ ಟಿ20 ಮತ್ತು ಏಕದಿನ ಚಾಂಪಿಯನ್‌ಷಿಪ್‌ಅನ್ನು ಯಶಸ್ವಿಯಾಗಿ ಸಂಘಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.