ADVERTISEMENT

ಒಳಗಣ್ಣಲ್ಲೇ ಕ್ರಿಕೆಟ್ ಆಸ್ವಾದಿಸುವ ಅಲನ್

ಪಿಟಿಐ
Published 23 ಫೆಬ್ರುವರಿ 2020, 19:45 IST
Last Updated 23 ಫೆಬ್ರುವರಿ 2020, 19:45 IST

ವೆಲಿಂಗ್ಟನ್ : ಕೂದಲು ಕೆದರಿದ ವ್ಯಕ್ತಿಯೊಬ್ಬರು ಬಿಳಿ ಕೋಲು ಹಿಡಿದುಕೊಂಡು ಬೇಸಿನ್ ರಿವರ್ಸ್ ಕ್ರೀಡಾಂಗಣಕ್ಕೆ ಬಂದರೆ ಹೆಚ್ಚಿನವರಿಗೆ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ಇಲ್ಲಿ ನಡೆಯುವ ಟೆಸ್ಟ್ ಪಂದ್ಯಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸದ ಆ ವ್ಯಕ್ತಿ ಅಲನ್ ಜೋನ್ಸ್ ಎಂಬುದು ಬಹುತೇಕರಿಗೆ ಗೊತ್ತೇ ಇದೆ.

ಹುಟ್ಟು ಅಂಧ ಅಲನ್ ಜೋನ್ಸ್‌ಗೆ ಈಗ 78 ವರ್ಷ. ಆದರೂ ಕುಂದದ ಉತ್ಸಾಹದಿಂದ ಪಂದ್ಯವನ್ನು ಒಳಗಣ್ಣಿನಿಂದ ಆಸ್ವಾದಿಸುತ್ತಾರೆ. ಯಾರ ನೆರವೂ ಇಲ್ಲದೆ ಕ್ರೀಡಾಂಗಣದ ಒಳಗೆ ಪ್ರವೇಶಿಸಿ ಕಾಯ್ದಿರಿಸಿದ ಆಸನದಲ್ಲಿ ಕುಳಿತುಕೊಳ್ಳುತ್ತಾರೆ. ‘40 ವರ್ಷಗಳಿಂದ ಇಲ್ಲಿ ನಡೆದ ಬಹುತೇಕ ಎಲ್ಲ ಟೆಸ್ಟ್ ಪಂದ್ಯಗಳಿಗೂ ಹಾಜರಾಗಿದ್ದೇನೆ. ಚೆಂಡು ಬ್ಯಾಟಿಗೆ ಸೋಕಿದಾಗ ಉಂಟಾಗುವ ಸದ್ದು ಕೇಳುವುದೇ ಖುಷಿ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT