ADVERTISEMENT

ಸಾಯಿದೀಪ್‌, ಅನಿರುದ್ಧ್‌ ಶತಕ

ಬಿಟಿಆರ್‌ ಕಪ್‌ 14 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 18:24 IST
Last Updated 17 ನವೆಂಬರ್ 2018, 18:24 IST

ಬೆಂಗಳೂರು: ಸಾಯಿದೀಪ್‌ (100 ರನ್‌) ಮತ್ತು ಅನಿರುದ್ಧ್‌ (ಔಟಾಗದೆ 158 ರನ್‌) ಅವರ ಅಮೋಘ ಶತಕಗಳ ಬಲದಿಂದ ವಿವೇಕಾನಂದ ಶಾಲಾ ತಂಡ ಬಿಟಿಆರ್‌ ಕಪ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು–1, ಡಿವಿಷನ್‌–2ರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಜ್ಯೋತಿ ಕೇಂದ್ರೀಯ ವಿದ್ಯಾಲಯ ವಿರುದ್ಧ 218ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸಂಕ್ಷಿ‍‍ಪ್ತ ಸ್ಕೋರ್‌: ವಿವೇಕಾನಂದ ಶಾಲೆ: 50 ಓವರ್‌ಗಳಲ್ಲಿ 3 ವಿಕೆಟ್‌ಗೆ 352 (ಸಾಯಿದೀಪ್‌ 100, ಗ್ಯಾನ್‌ 73, ಅನಿರುದ್ಧ್‌ ಔಟಾಗದೆ 158). ಜ್ಯೋತಿ ಕೇಂದ್ರೀಯ ವಿದ್ಯಾಲಯ: 35.1 ಓವರ್‌ಗಳಲ್ಲಿ 134 (ಎಸ್‌.ಎ.ಅನಿರುದ್ಧ್‌ ಔಟಾಗದೆ 65; ಪ್ರತೀಕ್‌ 25ಕ್ಕೆ3). ಫಲಿತಾಂಶ: ವಿವೇಕಾನಂದ ಶಾಲೆಗೆ 218ರನ್‌ ಗೆಲುವು.

ಸೇಂಟ್‌ ಜೋಸೆಫ್‌ ಇಂಡಿಯನ್‌ ಮಿಡ್ಲ್‌ ಸ್ಕೂಲ್‌: 38.3 ಓವರ್‌ಗಳಲ್ಲಿ 189 (ರಿತ್ವಿಕ್‌ 43; ಶ್ರವಂತ್‌ 27ಕ್ಕೆ3, ಯಶಸ್‌ 16ಕ್ಕೆ2). ಕೇಂಬ್ರಿಡ್ಜ್‌ ಪಬ್ಲಿಕ್‌ ಶಾಲೆ, ಚನ್ನಪಟ್ಟಣ: 29.3 ಓವರ್‌ಗಳಲ್ಲಿ 102 (ಪ್ರತ್ಯೂಷ್‌ 17ಕ್ಕೆ5, ಅಶ್ವಿನ್‌ 4ಕ್ಕೆ2). ಫಲಿತಾಂಶ: ಸೇಂಟ್‌ ಜೋಸೆಫ್‌ ಶಾಲೆಗೆ 87ರನ್‌ ಜಯ.

ADVERTISEMENT

ವಿದ್ಯಾನಿಕೇತನ ಪಬ್ಲಿಕ್‌ ಶಾಲೆ, ಉಲ್ಲಾಳ: 32.4 ಓವರ್‌ಗಳಲ್ಲಿ 115 (ಆದರ್ಶ್‌ ಪಾಟೀಲ 50; ಎಸ್‌.ಸಾತ್ವಿಕ್ 31ಕ್ಕೆ4, ಬಿ.ಆರ್ಯನ್‌ 14ಕ್ಕೆ2). ಕ್ಯಾಮೆಲ್‌ ಸ್ಕೂಲ್‌ ‘ಬಿ’: 29.2 ಓವರ್‌ಗಳಲ್ಲಿ 6 ವಿಕೆಟ್‌ಗೆ 116 (ಬಿ.ಆರ್ಯನ್‌ ಔಟಾಗದೆ 54; ಆರ್‌.ಕುಶಾಲ್‌ 26ಕ್ಕೆ3, ಆದರ್ಶ್‌ 29ಕ್ಕೆ3). ಫಲಿತಾಂಶ: ಕ್ಯಾಮೆಲ್‌ ತಂಡಕ್ಕೆ 4 ವಿಕೆಟ್‌ ಗೆಲುವು.

ಬಿಜಿಎಸ್‌ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್‌ ಶಾಲೆ: 43 ಓವರ್‌ಗಳಲ್ಲಿ 147 (ವಿಶ್ವೇಶ್‌ 23ಕ್ಕೆ2, ಅಭಯ್‌ ಸಿಂಗ್‌ 23ಕ್ಕೆ3, ಸುಕೃತ್‌ 10ಕ್ಕೆ2). ಶ್ರೀ ಅರವಿಂದೊ ಮೆಮೋರಿಯಲ್‌ ಸ್ಕೂಲ್‌, ಸಿಬಿಎಸ್‌ಇ: 37.1 ಓವರ್‌ಗಳಲ್ಲಿ 9 ವಿಕೆಟ್‌ಗೆ 148 (ಅಭಯ್‌ ಸಿಂಗ್‌ 48; ವೈಭವ್‌ 19ಕ್ಕೆ4, ಭಾರ್ಗವ್‌ 10ಕ್ಕೆ2). ಫಲಿತಾಂಶ: ಅರವಿಂದೊ ಶಾಲೆಗೆ 1 ವಿಕೆಟ್‌ ಜಯ.

ಜೈನ್‌ ಹೆರಿಟೇಜ್‌ ಶಾಲೆ: 46.3 ಓವರ್‌ಗಳಲ್ಲಿ 194 (ಕೆ.ಎಸ್‌.ಆದಿತ್ಯ 42, ಅದೋಕ್ಷ್‌ 40, ಎ.ಪಿ.ಅಕ್ಷಯ್‌ 40; ಅರ್ಪಿತ್‌ 28ಕ್ಕೆ2, ಅತಿನ್‌ 53ಕ್ಕೆ4). ಕ್ರೈಸ್ಟ್‌ ಸ್ಕೂಲ್‌, ಐಸಿಎಸ್‌ಇ: 20.5 ಓವರ್‌ಗಳಲ್ಲಿ 93 (ಅರ್ಪಿತ್‌ ಔಟಾಗದೆ 35; ಕೆ.ಎಸ್‌.ಆದಿತ್ಯ 15ಕ್ಕೆ2, ಮಹೇಶ್‌ 24ಕ್ಕೆ3, ಮೀತ್‌ 24ಕ್ಕೆ3). ಫಲಿತಾಂಶ: ಜೈನ್‌ ಹೆರಿಟೇಜ್‌ ಶಾಲೆಗೆ 101ರನ್‌ ಗೆಲುವು.

ಪ್ರೆಸಿಡೆನ್ಸಿ ಸ್ಕೂಲ್‌, ನಂದಿನಿ ಬಡಾವಣೆ: 40.5 ಓವರ್‌ಗಳಲ್ಲಿ 121 (ಸಮರ್ಥ್‌ ಔಟಾಗದೆ 38; ಎಲ್‌.ವಿನಮ್ರ 38ಕ್ಕೆ3, ಯಶ್‌ ಅಗರವಾಲ್ 36ಕ್ಕೆ4). ಬೆಥನಿ ಪ್ರೌಢಶಾಲೆ: 35.5 ಓವರ್‌ಗಳಲ್ಲಿ 120 (ಕೆ.ಮಾನವ್‌ 25ಕ್ಕೆ2, ಆರ್‌.ವರುಣ್‌ 30ಕ್ಕೆ4, ಗೌತಮ್‌ 6ಕ್ಕೆ2). ಫಲಿತಾಂಶ: ಪ್ರೆಸಿಡೆನ್ಸಿ ಶಾಲೆಗೆ 1 ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.