ADVERTISEMENT

ಜನವರಿಯಲ್ಲಿ ಒಡಿಶಾ ಓಪನ್ ಬ್ಯಾಡ್ಮಿಂಟನ್

ಬಿಡಬ್ಲ್ಯುಎಫ್‌ ವೇಳಾಪಟ್ಟಿಯಲ್ಲಿ ಸೇರ್ಪಡೆ

ಪಿಟಿಐ
Published 28 ಅಕ್ಟೋಬರ್ 2021, 15:15 IST
Last Updated 28 ಅಕ್ಟೋಬರ್ 2021, 15:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ಜನವರಿಯಲ್ಲಿ ನಡೆಯಲಿರುವ ಒಡಿಶಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ತನ್ನ ವೇಳಾಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.

ಇದರಿಂದಾಗಿ ಮುಂದಿನ ವರ್ಷ ಭಾರತವು ಮೂರು ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಗಳನ್ನು ನಡೆಸಲಿದೆ.

ಇಂಡಿಯಾ ಓಪನ್ ಸೂಪರ್ 500 ಟೂರ್ನಿ (ಜ 11–16) ಮತ್ತು ಸೈಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ –300 ಟೂರ್ನಿ (ಜ 18–23) ನಡೆಯಲಿದೆ. ಜ. 25 ರಿಂದ 30ರವರೆಗೆ ಒಡಿಶಾ ಓಪನ್ ಸೂಪರ್ 100 ಟೂರ್ನಿ ಆಯೋಜನೆಗೊಳ್ಳಲಿದೆ.

ADVERTISEMENT

ಇಂಡಿಯಾ ಓಪನ್ ಮತ್ತು ಸೈಯದ್ ಮೋದಿ ಟೂರ್ನಿಗಳನ್ನು 2020ರಲ್ಲಿ ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿತ್ತು. ಆಗ ರದ್ದಾಗಿದ್ದ ಹೈದರಾಬಾದ್ ಓಪನ್ ಸೂಪರ್ 100 ಟೂರ್ನಿಯನ್ನು 2022ರ ವೇಳಾಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ.

‘ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ. ಜನವರಿ 2021ರಲ್ಲಿ ಏಷ್ಯನ್ ಲೆಗ್‌ ಯಶಸ್ವಿಯಾದ ನಂತರ ಥಾಯ್ಲೆಂಡ್ ದೇಶವು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಿಗೆ ಪ್ರಮುಖ ಸ್ಥಳವಾಗಿದೆ. ಅಂತರರಾಷ್ಟ್ರೀಯ ಪ್ರಯಾಣದ ಇತಿಮಿತಿಗಳಿಗೆ ಅನುಗುಣವಾಗಿ ಮುಂದಿನ ವರ್ಷದ ಟೂರ್ನಿಗಳನ್ನು ಯೋಜಿಸಲಾಗಿದೆ. ಕ್ಲಸ್ಟರ್‌ ಮಟ್ಟದಲ್ಲಿ ಟೂರ್ನಿಗಳನ್ನು ಸಂಯೋಜಿಸಿ ವೇಳಾಪಟ್ಟಿ ಮಾಡಲಾಗಿದೆ’ ಎಂದು ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಥಾಮಸ್ ಲುಂಡ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.