ADVERTISEMENT

ಸಿಎಗೆ ಭಾರೀ ಆರ್ಥಿಕ ನಷ್ಟದ ಭೀತಿ

ಪಿಟಿಐ
Published 29 ಮೇ 2020, 18:23 IST
Last Updated 29 ಮೇ 2020, 18:23 IST

ಮೆಲ್ಬರ್ನ್‌: ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಈ ಬಾರಿಯ ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್‌ ಮುಂದೂಡಿಕೆಯ ಭೀತಿ ಎದುರಿಸುತ್ತಿದ್ದು, ಅಲ್ಲಿನ ಮಂಡಳಿ ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ತಲೆಬಿಸಿಗೆ ಕಾರಣವಾಗಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಟೂರ್ನಿ ನಡೆಯದಿದ್ದರೆ ತನಗೆ ಭಾರಿ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಮಂಡಳಿ ಶುಕ್ರವಾರ ಅಲವತ್ತುಕೊಂಡಿದೆ.

‘ನಮ್ಮ ಆತಿಥ್ಯದಲ್ಲಿ ಅಕ್ಟೋಬರ್‌–ನವಂಬರ್‌ನಲ್ಲಿ ನಿಗದಿಯಾಗಿರುವ ವಿಶ್ವಕಪ್‌ ಭವಿಷ್ಯ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಅನಿಶ್ಚಿತವಾಗಿದೆ. ಟೂರ್ನಿ ನಿಗದಿತ ಅವಧಿಯಲ್ಲೇ ನಡೆಯಲಿದೆ ಎಂಬ ವಿಶ್ವಾಸ ನಮ್ಮದು’ ಎಂದು ಸಿಎದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್‌ ರಾಬರ್ಟ್ಸ್‌ ಹೇಳಿದ್ದಾರೆ.

ಜೂನ್‌ 10ರಂದು ವಿಶ್ವಕಪ್‌ ಕುರಿತು ನಿರ್ಧಾರ ಕೈಗೊಳ್ಳಲು ಗುರುವಾರ ನಡೆದ ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ADVERTISEMENT

‘ಒಂದು ವೇಳೆ ಟೂರ್ನಿ ನಡೆಯದಿದ್ದರೆ ₹ 400 ಕೋಟಿಗಿಂತಲೂ ಅಧಿಕ ಆದಾಯ ನಮ್ಮ ಕೈತಪ್ಪಲಿದೆ’ ಎಂದು ರಾಬರ್ಟ್ಸ್‌ ತಿಳಿಸಿದ್ದಾರೆ.

ಆದರೆ ಭಾರತದ ವಿರುದ್ಧಡಿಸೆಂಬರ್‌ನಲ್ಲಿ ತನ್ನದೇ ನೆಲದಲ್ಲಿ ನಡೆಯಲಿರುವ‌ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯು ನಿಗದಿತ ಅವಧಿಗೆ ನಡೆಯಲಿದೆ ಎಂಬ ಅದಮ್ಯ ವಿಶ್ವಾಸವನ್ನೂ ಸಿಎ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.