ADVERTISEMENT

ಧಾರವಾಡದ ಸಿಸಿಕೆ ತಂಡ ಶುಭಾರಂಭ

ಕೆಎಸ್‌ಸಿಎ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 10:11 IST
Last Updated 7 ನವೆಂಬರ್ 2019, 10:11 IST
ಶತಕ ಬಾರಿಸಿದ ತುಷಾರ ಸಿಂಗ್‌
ಶತಕ ಬಾರಿಸಿದ ತುಷಾರ ಸಿಂಗ್‌   

ಹುಬ್ಬಳ್ಳಿ: ಬದ್ರಿ ಮತ್ತು ಸಮರ್ಥ ಊಟಿ ಅವರ ಅರ್ಧಶತಕಗಳ ಬಲದಿಂದ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ‘ಬಿ’ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಳಗಾವಿಯ ಯೂನಿಯನ್ ಜಿಮ್ಖಾನ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತು. ಸಿಸಿಕೆ ತಂಡ ಈ ಗುರಿಯನ್ನು 20.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು. ಬದ್ರಿ ಅಜೇಯ 70 ಹಾಗೂ ಸಮರ್ಥ ಊಟಿ ಅಜೇಯ 63 ರನ್‌ ಗಳಿಸಿದರು.

ದಿನದ ಇತರ ಪಂದ್ಯಗಳಲ್ಲಿ ಬೆಳಗಾವಿಯ ಅಮೃತ ಪೋತದಾರ ಕ್ರಿಕೆಟ್‌ ಕ್ಲಬ್‌, ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡದ ಮೇಲೂ, ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ‘ಎ’ ತಂಡ ಇದೇ ಕ್ಲಬ್‌ನ ‘ಬಿ’ ತಂಡದ ವಿರುದ್ಧವೂ ಗೆಲುವು ಸಾಧಿಸಿದವು.

ADVERTISEMENT

ಸಂಕ್ಷಿಪ್ತ ಸ್ಕೋರು: ಬೆಳಗಾವಿಯ ಯೂನಿಯನ್‌ ಜಿಮ್ಖಾನ 50 ಓವರ್‌ಗಳಲ್ಲಿ 6ಕ್ಕೆ165 (ಮಜೀದ್‌ ಮಕಂದರ್ 82, ಕೆ. ವೈಭವ 34, ದೀಪಕ ನಾರ್ವೇಕರ 22; ಅಕ್ಷಯ ಹಿರೇಮಠ 17ಕ್ಕೆ3), ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಎ’ ತಂಡ 20.4 ಓವರ್‌ಗಳಲ್ಲಿ 1 ವಿಕೆಟ್‌ಗೆ 166 (ಬದ್ರಿ 70, ಸಮರ್ಥ ಊಟಿ 63; ಕೆ. ವೈಭವ 57ಕ್ಕೆ1). ಫಲಿತಾಂಶ: ಸಿಸಿಕೆ ತಂಡಕ್ಕೆ 9 ವಿಕೆಟ್‌ ಗೆಲುವು.

ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಎ’ 50 ಓವರ್‌ಗಳಲ್ಲಿ 8ಕ್ಕೆ276 (ಮುದಸೀರ್‌ ನಾಜೀರ್ ಔಟಾಗದೆ 69, ವಿಶಾಲ್ 36, ನವೀನ ಬಾಲಾ 36; ಜನೀತ್ 55ಕ್ಕೆ3). ಅಮೃತ ಪೋತದಾರ ಕ್ಲಬ್‌ 45.3 ಓವರ್‌ಗಳಲ್ಲಿ 6ಕ್ಕೆ280 (ತುಷಾರ ಸಿಂಗ್‌ 112, ರಿಷಬ್‌ ಸಿಂಗ್‌ 42; ಅಭಿಷೇಕ ಯಾದವಾಡ 15ಕ್ಕೆ2, ಸಫಲ್ ಶೆಟ್ಟಿ 36ಕ್ಕೆ2). ಫಲಿತಾಂಶ: ಅಮೃತ ಪೋತದಾರ ಕ್ಲಬ್‌ಗೆ 4 ವಿಕೆಟ್‌ ಗೆಲುವು.

ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡ 48.2 ಓವರ್‌ಗಳಲ್ಲಿ 220 (ಭರತ್ ಇಟಗಿ 76, ಶಿವಾಜಿ ವಡ್ಡರ್ 34; ಡಿ. ಬಸವರಾಜ 57ಕ್ಕೆ5). ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡ 43.3 ಓವರ್‌ಗಳಲ್ಲಿ 5ಕ್ಕೆ221 (ನಿತಿನ್ ಭಿಲ್ಲೆ 56, ಇಂದ್ರಸೇನ್‌ ದಾನಿ 46, ಸಚಿನ್ ರಜಪೂತ್ ಅಜೇಯ 37, ಸಾಗರ ಮುರಗೋಡ 37; ಸಚಿನ್ ಕೊಡ್ಲಿ 9ಕ್ಕೆ2). ಫಲಿತಾಂಶ: ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಎ’ ತಂಡಕ್ಕೆ 5 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.