ADVERTISEMENT

ಟಾಸ್‌ ಗೆದ್ದ ಸಿಎಸ್‌ಕೆ; ಬೌಲಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 14:38 IST
Last Updated 23 ಮಾರ್ಚ್ 2019, 14:38 IST
   

ಬೆಂಗಳೂರು: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ನಡುವಿನಐಪಿಎಲ್‌ 12ನೇ ಆವೃತ್ತಿಯ ಮೊದಲ ಕ್ರಿಕೆಟ್‌ ಪಂದ್ಯದಲ್ಲಿಟಾಸ್‌ ಗೆದ್ದಚೆನ್ನೈ ಸೂಪರ್‌ ಕಿಂಗ್ಸ್‌ ಬೌಲಿಂಗ್‌ಆಯ್ದುಕೊಂಡಿದೆ.

‘ಮೊದಲ ಪಂದ್ಯ ಆಗಿರುವುದರಿಂದ ಪಿಚ್‌ ಮತ್ತು ಎಷ್ಟು ಟಾರ್ಗೆಟ್‌ ನೀಡಬೇಕು ಎನ್ನುವ ಬಗ್ಗೆ ನಿಖರತೆ ಇಲ್ಲ. ಹೀಗಾಗಿ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕಮಹೇಂದ್ರಸಿಂಗ್ ಧೋನಿ ಹೇಳಿದರು.

ರಾಯಲ್‌ ಚಾಲೆಂಜರ್ಸ್‌ನಿಂದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ಜೋಡಿ ಮೊದಲು ಬ್ಯಾಂಟಿಂಗ್‌ ಮಾಡಲು ಕಣಕ್ಕಿಳಿದಿದೆ.

ADVERTISEMENT

ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ಛಲ. ಹೋದ ಹನ್ನೊಂದು ಟೂರ್ನಿಗಳಲ್ಲಿಯೂ ಪ್ರಶಸ್ತಿ ಗೆಲುವಿನ ಕನಸು ಭಗ್ನಗೊಂಡಿರುವ ನಿರಾಸೆಯನ್ನು ಬದಿಗಿಟ್ಟು, ‘ಈ ಸಲ ಕಪ್ ನಮ್ದೆ’ ಎಂಬ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿ ಸಿದ್ಧವಾಗಿದೆ. ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಮತ್ತು ಮಾಜಿ ನಾಯಕ ಧೋನಿಯ ನಡುವಣದ ಪ್ರತಿಷ್ಠೆಯ ಪಂದ್ಯವಾಗಿಯೂ ಇದು ಗಮನ ಸೆಳೆದಿದೆ.

ಉಭಯ ತಂಡಗಳ ಬಲಾಬಲ

ಪಂದ್ಯ: 22

ಸಿಎಸ್‌ಕೆ ಜಯ: 14

ಆರ್‌ಸಿಬಿ ಜಯ: 07

ಫಲಿತಾಂಶವಿಲ್ಲ: 01

ಪ್ರಮುಖ ಅಂಶಗಳು

34 ಜಯ: ಸಿಎಸ್‌ಕೆ ತಂಡವು ಚೆಪಾಕ್‌ನಲ್ಲಿ ಗೆದ್ದ ಪಂದ್ಯಗಳು. 14ರಲ್ಲಿ ಸೋಲನುಭವಿಸಿದೆ

02 ಜಯ: ಆರ್‌ಸಿಬಿಯು ಚೆಪಾಕ್‌ನಲ್ಲಿ ಜಯಿಸಿದ ಪಂದ್ಯಗಳು. ಇನ್ನುಳಿದ ಆರರಲ್ಲಿ ಸೋತಿದೆ.

15 ರನ್‌; ಟೂರ್ನಿಯಲ್ಲಿ ಐದು ಸಾವಿರ ರನ್‌ ಗಡಿ ತಲುಪಲು ಸಿಎಸ್‌ಕೆಯ ಸುರೇಶ್ ರೈನಾಗೆ ಬೇಕಿರುವ ರನ್‌ಗಳು

52 ರನ್; ಐಪಿಎಲ್‌ನಲ್ಲಿ ಐದು ಸಾವಿರ ರನ್‌ ಪೂರೈಸಲು ವಿರಾಟ್ ಕೊಹ್ಲಿಗೆ ಅವಶ್ಯವಿರುವ ರನ್‌ಗಳು

08 ತಂಡಗಳು: ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.