ADVERTISEMENT

ಸಸೆಕ್ಸ್ ತಂಡದ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿಯೇ ಚೇತೇಶ್ವರ್ ಪೂಜಾರ ಶತಕ

ಪಿಟಿಐ
Published 20 ಜುಲೈ 2022, 15:42 IST
Last Updated 20 ಜುಲೈ 2022, 15:42 IST
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ   

ಲಂಡನ್: ಸಸೆಕ್ಸ್ ತಂಡದ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿಯೇ ಭಾರತದ ಚೇತೇಶ್ವರ್ ಪೂಜಾರ ಶತಕವನ್ನೂ ದಾಖಲಿಸಿದ್ದಾರೆ.

ಬುಧವಾರ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಪೂಜಾರ (143; 263ಎಸೆತ, 4X13, 6X1) ಶತಕ ದಾಖಲಿಸಿದರು. ಅವರ ಆಟದ ನೆರವಿನಿಂದ ಸಸೆಕ್ಸ್ ತಂಡವು ಮಿಡ್ಲಸೆಕ್ಸ್ ತಂಡದ ಎದುರು 6 ವಿಕೆಟ್‌ಗಳಿಗೆ 412 ರನ್‌ ಗಳಿಸಿತು.

ತಂಡವು 99 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿಪೂಜಾರ ಮತ್ತು ಟಾಮ್ ಅಲ್ಸಾಪ್ (135; 277ಎಸೆತ, 4X15) ಮೂರನೇ ವಿಕೆಟ್ ಜೊತೆಯಾಟದಲ್ಲಿ 219 ರನ್‌ ಸೇರಿಸಿದರು.

ತಂಡದ ನಾಯಕ ಟಾಮ್ ಹೆನ್ಸ್ ಅವರು ಗಾಯಗೊಂಡಿರುವುದರಿಂದ ಪೂಜಾರ ತಂಡವನ್ನು ಮುನ್ನಡೆಸುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.