ADVERTISEMENT

ಕ್ರಿಕೆಟ್‌: ಕರ್ನಾಟಕಕ್ಕೆ ತಿರುಗೇಟು ನೀಡಿದ ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 18:59 IST
Last Updated 2 ಜನವರಿ 2019, 18:59 IST

ಮೈಸೂರು: ಮೋಹನ್‌ ಪ್ರಕಾಶ್ (21ಕ್ಕೆ 5) ಅವರ ಪ್ರಭಾವಿ ಬೌಲಿಂಗ್‌ ಮತ್ತು ಎಸ್‌.ರಾಧಾಕೃಷ್ಣನ್ (61) ಗಳಿಸಿದ ಅಜೇಯ ಅರ್ಧಶತಕದ ನೆರವಿನಿಂದ ತಮಿಳುನಾಡು ತಂಡ ಇಲ್ಲಿ ನಡೆಯುತ್ತಿರುವ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕಕ್ಕೆ ತಿರುಗೇಟು ನೀಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ತಮಿಳುನಾಡು ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 197 ರನ್‌ ಗಳಿಸಿದೆ. ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 94 ರನ್‌ಗಳಿಗೆ ಆಲೌಟಾಗಿತ್ತು.

ಹಠಾತ್‌ ಕುಸಿತ: ಮೂರು ವಿಕೆಟ್‌ಗೆ 94 ರನ್‌ಗಳಿಂದ ಬುಧವಾರ ಆಟ ಮುಂದುವರಿಸಿದ ಕರ್ನಾಟಕ ತಂಡ ಹಠಾತ್‌ ಕುಸಿತ ಕಂಡು 120 ರನ್‌ಗಳಿಗೆ ಆಲೌಟಾಯಿತು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಪಡೆಯಬೇಕೆಂಬ ಕರ್ನಾಟಕದ ಕನಸಿಗೆ ಮೋಹನ್‌ ಪ್ರಕಾಶ್‌ ಮತ್ತು ಅಜಿತ್‌ ಕುಮಾರ್‌ (35ಕ್ಕೆ 3) ಅಡ್ಡಿಯಾದರು. ಕೇವಲ 16 ರನ್‌ ಸೇರಿಸುವಷ್ಟರಲ್ಲಿ ಕೊನೆಯ ಏಳು ವಿಕೆಟ್‌ಗಳು ಬಿದ್ದವು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು ಮೊದಲ ಇನಿಂಗ್ಸ್‌: 42.2 ಓವರ್‌ಗಳಲ್ಲಿ 94 ಮತ್ತು ಎರಡನೇ ಇನಿಂಗ್ಸ್ 57 ಓವರ್‌ಗಳಲ್ಲಿ 5 ವಿಕೆಟ್‌ಗೆ 179 (ಕೆ.ಮುಕುಂದ್ 34, ಎಸ್.ರಾಧಾಕೃಷ್ಣನ್‌ ಬ್ಯಾಟಿಂಗ್ 61, ವಿಶಾಲ್‌ ವೈದ್ಯ 32, ಕುಶಾಲ್‌ ವಾದ್ವಾನಿ 44ಕ್ಕೆ 2) ಕರ್ನಾಟಕ ಮೊದಲ ಇನಿಂಗ್ಸ್ 66.2 ಓವರ್‌ಗಳಲ್ಲಿ 120 (ಕಿಶನ್‌ ಬಿದಾರೆ 11, ಕುಶಾಲ್‌ ವಾದ್ವಾನಿ 10, ಮೋಹನ್‌ ಪ್ರಕಾಶ್‌ 21ಕ್ಕೆ 5, ಅಜಿತ್‌ ಕುಮಾರ್ 35ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.