ADVERTISEMENT

ಆಗಸ್ಟ್‌ ಒಂದರಿಂದ ಕೌಂಟಿ ಕ್ರಿಕೆಟ್‌

ರಾಯಿಟರ್ಸ್
Published 29 ಜೂನ್ 2020, 15:52 IST
Last Updated 29 ಜೂನ್ 2020, 15:52 IST
   

ಲಂಡನ್‌: ಆಗಸ್ಟ್‌ ಒಂದರಿಂದ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ನಡೆಸಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ನಿರ್ಧರಿಸಿದೆ.

ಈ ಬಾರಿಯ ಪುರುಷರ ಚಾಂಪಿಯನ್‌ಷಿಪ್‌ ಏಪ್ರಿಲ್‌ 12ರಿಂದಲೇ ಆರಂಭವಾಗಬೇಕಿತ್ತು. ಕೊರೊನಾ ಬಿಕ್ಕಟ್ಟು ಸೃಷ್ಟಿಯಾಗಿದ್ದರಿಂದ ಇಂಗ್ಲೆಂಡ್‌ ಸರ್ಕಾರವು ಕ್ರಿಕೆಟ್‌ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತ್ತು. ಹೀಗಾಗಿ ಚಾಂಪಿಯನ್‌ಷಿಪ್‌ ಅನ್ನು ಮುಂದೂಡಲಾಗಿತ್ತು.

ಜುಲೈ ಆರಂಭದಲ್ಲಿ ನಡೆಯುವ ಸಭೆಯಲ್ಲಿ 18 ಕ್ಲಬ್‌ಗಳ ಜೊತೆ ಚರ್ಚಿಸಿ ಟೂರ್ನಿಯ ಮಾದರಿ ಹಾಗೂ ಪರಿಷ್ಕೃತವೇಳಾಪಟ್ಟಿಯನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ. ಈ ವರ್ಷ ನಿಗದಿಯಾಗಿದ್ದ ಮಹಿಳಾ ದೇಶಿಯ ಟೂರ್ನಿಗಳನ್ನು ಆಯೋಜಿಸಲೂ ಇಸಿಬಿ ನಿರ್ಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.