ADVERTISEMENT

ಕ್ರಿಕೆಟ್: ಬಿಇಎಂಎಲ್‌ ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST
ಕೆಎಸ್‌ಸಿಎ ಮೂರನೇ ಡಿವಿಷನ್ ಗುಂಪು ಎರಡರ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಬಿಇಎಂಎಲ್ ರಿಕ್ರಿಯೇಷನ್ ಕ್ಲಬ್ ತಂಡ; (ಎಡದಿಂದ ಬಲಕ್ಕೆ), ನಿಂತವರು: ಬಿ.ಎನ್. ಯಶವಂತ್, ನರೇಶ್ ಕುಮಾರ್, ಆದರ್ಶ ಪ್ರಕಾಶ್, ಮನೋಜ್ ಮಾರುತಿ, ಕೆ. ಸುಧಾಕರನ್, ಆರ್. ಪೆರುಮಾಳ್, ಆಯುಷ್ ಕುಮಾರ್ ಬಾರಿಕ್, ಎಸ್‌.ಟಿ. ರಾಜೇಂದ್ರನ್, ಪಿ. ಶ್ರೀನಿವಾಸ್ ರಾವ್, ಜಿ. ಪ್ರಶಾಂತ್, ಹೃದ್ಧಿಮಾನ್ ಬಸು. ಕುಳಿತವರು: ಪಿ. ಮಹೇಶ್, ಎಂ.ಆರ್. ರವೀಂದ್ರ, ಪಿ.ವಿ. ಸುಮಂತ್, ಎಂ.ಕೆ. ಶ್ರೀನಿವಾಸ್, ವಿವೇಕ್ ಭಟ್ಕಳ, ಬಿ.ಎಸ್. ರಘೋತ್ತಮ, ಅಮನ್ ರಾಜ್

ಬೆಂಗಳೂರು: ಆದರ್ಶ ಪ್ರಕಾಶ್ (22ಕ್ಕೆ4) ಮತ್ತು ಹೃದ್ಧಿಮಾನ್ ಬಸು (32ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದ ಬಿಇಎಂಎಲ್ ರಿಕ್ರಿಯೇಷನ್ ಕ್ಲಬ್‌ ತಂಡವು ಕೆಎಸ್‌ಸಿಎ ಎರಡನೇ ಗುಂಪಿನ ಮೂರನೇ ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿತು. ಫೈನಲ್‌ ಪಂದ್ಯದಲ್ಲಿ ಬಿಇಎಂಎಲ್ ತಂಡವು 9 ವಿಕೆಟ್‌ಗಳಿಂದ ಕರ್ನಾಟಕ ಪೋಸ್ಟಲ್ ಸ್ಪೋರ್ಟ್ಸ್‌ ತಂಡದ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ ಪೋಸ್ಟಲ್ ಸ್ಪೋರ್ಟ್ಸ್‌: 22.5 ಓವರ್‌ಗಳಲ್ಲಿ 85 (ರಮೇಶ್ ಧೂಪದ್ 43, ಹೃದ್ಧಿಮಾನ್ ಬಸು 32ಕ್ಕೆ3, ಆದರ್ಶ ಪ್ರಕಾಶ್ 22ಕ್ಕೆ4, ಆಯುಷ್ ಕುಮಾರ್ ಬಾರಿಕ್ 31ಕ್ಕೆ3), ಬಿಇಎಂಎಲ್ ರಿಕ್ರಿಯೇಷನ್ ಕ್ಲಬ್: 8 ಓವರ್‌ಗಳಲ್ಲಿ 1 ವಿಕೆಟ್‌ಗೆ 90 (ಅಮನ್ ರಾಜ್ 28, ಬಿ.ಎನ್. ಯಶವಂತ್ ಔಟಾಗದೆ 42) ಫಲಿತಾಂಶ: ಬಿಇಎಂಎಲ್‌ಗೆ 9 ವಿಕೆಟ್‌ಗಳಿಂದ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT