ADVERTISEMENT

ಕ್ರಿಕೆಟ್‌ ಟೂರ್ನಿ | ಸೆಮಿಗೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 22:30 IST
Last Updated 28 ಫೆಬ್ರುವರಿ 2024, 22:30 IST
ಕ್ರಿಕೆಟ್‌
ಕ್ರಿಕೆಟ್‌   

ಬೆಂಗಳೂರು: ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಜಾರ್ಖಂಡ್‌ ವಿರುದ್ಧ ಡ್ರಾ ಸಾಧಿಸಿ, ಸೆಮಿಫೈನಲ್‌ ಪ್ರವೇಶಿಸಿತು.

ಜಮ್ಶೆಡ್‌ಪುರದಲ್ಲಿ ನಡೆದ ಪಂದ್ಯಕ್ಕೆ ಬುಧವಾರ ಮಳೆಯಿಂದಾಗಿ ಅಡಚಣೆ ಉಂಟಾಯಿತು. ಮುನ್ನಡೆ ಯನ್ನು ಆಧರಿಸಿ ಫಲಿತಾಂಶ ಘೋಷಣೆ ಮಾಡಲಾಯಿತು.

ಕರ್ನಾಟಕ ತಂಡವು ಮಾರ್ಚ್ 3ರಿಂದ ನಾಗ್ಪುರದಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ. ಕರ್ನಾಟಕ ರಣಜಿ ತಂಡದಲ್ಲಿದ್ದ ಧೀರಜ್ ಗೌಡ ಮತ್ತು ಅನೀಶ್ ಕೆ.ವಿ. ತಂಡಕ್ಕೆ ಮರಳಿದ್ದಾರೆ.

ADVERTISEMENT

ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ– ಮುಂಬೈ ತಂಡಗಳು ಮುಖಾಮುಖಿಯಾಗಲಿವೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಕರ್ನಾಟಕ 113.3 ಓವರ್‌ಗಳಲ್ಲಿ 405 (ಪ್ರಖರ ಚತುರ್ವೇದಿ 147, ಸ್ಮರಣ್‌ ಆರ್‌. 106). ಜಾರ್ಖಂಡ್ 124.5 ಓವರ್‌ಗಳಲ್ಲಿ 362 (ರಾಬಿನ್ ಮಿಂಜ್ 137, ಕೌನೈನ್ ಕುರೇಶಿ 102). ಎರಡನೇ ಇನಿಂಗ್ಸ್‌: ಕರ್ನಾಟಕ 28 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 94 (ಪ್ರಖರ ಚತುರ್ವೇದಿ ಔಟಾಗದೆ 73)

ಸೆಮಿಫೈನಲ್‌ಗೆ ಕರ್ನಾಟಕ ತಂಡ: ಸ್ಮರಣ್‌ ಆರ್‌. (ನಾಯಕ), ಮ್ಯಾಕ್ನೀಲ್ ಎಚ್. ನೊರೊನ್ಹಾ, ಅನೀಶ್ವರ್ ಗೌತಮ್ (ಉಪನಾಯಕ), ಅನೀಶ್‌ ಕೆ.ವಿ, ಕೃತಿಕ್ ಕೃಷ್ಣ (ವಿಕೆಟ್‌ ಕೀಪರ್‌), ಮೊಹ್ಸಿನ್ ಖಾನ್, ರಾಜವೀರ್ ವಾಧ್ವಾ, ಮೊನೀಶ್ ರೆಡ್ಡಿ, ಲೋಚನ್ ಗೌಡ (ವಿಕೆಟ್‌ ಕೀಪರ್‌), ಪ್ರಖರ ಚತುರ್ವೇದಿ, ಪಾರಸ್ ಗುರುಬಕ್ಷ್ ಆರ್ಯ, ಮನ್ವಂತ್‌ ಕುಮಾರ್ ಎಲ್‌, ಧೀರಜ್‌ ಜೆ. ಗೌಡ.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.