ADVERTISEMENT

ಟೆಸ್ಟ್‌ ಕ್ರಿಕೆಟ್: ಶ್ರೀಲಂಕಾ ಎದುರು ದಕ್ಷಿಣ ಆಫ್ರಿಕಾ ಜಯಭೇರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST
ವಿಕೆಟ್ ಗಳಿಸಿದ ಲುಂಗಿ ಗಿಡಿಯನ್ನು ಅಭಿನಂದಿಸಿದ ಸಹ ಆಟಗಾರರು  –ಎಎಫ್‌ಪಿ ಚಿತ್ರ
ವಿಕೆಟ್ ಗಳಿಸಿದ ಲುಂಗಿ ಗಿಡಿಯನ್ನು ಅಭಿನಂದಿಸಿದ ಸಹ ಆಟಗಾರರು  –ಎಎಫ್‌ಪಿ ಚಿತ್ರ   

ಸೆಂಚುರಿಯನ್: ಬೌಲರ್‌ಗಳ ಸಂಘಟಿತ ದಾಳಿಯ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 45 ರನ್‌ಗಳಿಂದ ಜಯಿಸಿತು.

ಸೂಪರ್‌ ಸ್ಪೋರ್ಟ್ಸ್‌ಪಾರ್ಕ್‌ಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವು 396 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು 621 ರನ್‌ ಗಳಿಸಿತ್ತು. 225 ರನ್‌ಗಳ ಮುನ್ನಡೆ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಲಂಕಾ ತಂಡವು ಈ ಮೊತ್ತವನ್ನು ಚುಕ್ತಾ ಮಾಡುವಲ್ಲಿ ವಿಫಲವಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ: 396, ದಕ್ಷಿಣ ಆಫ್ರಿಕಾ: 621, ಎರಡನೇ ಇನಿಂಗ್ಸ್: ಶ್ರೀಲಂಕಾ: 46.1 ಓವರ್‌ಗಳಲ್ಲಿ 180 (ವಾಣಿಂದು ಹೆಸರಂಗಾ 59, ಲುಂಗಿ ಗಿಡಿ 38ಕ್ಕೆ2, ಎನ್ರಿಚ್ ನೋಟಿಯ 47ಕ್ಕೆ2, ವಿಯಾನ್ ಮಲ್ದರ್ 39ಕ್ಕೆ2, ಲುಥೊ ಸಿಪಾಮ್ಲಾ 24ಕ್ಕೆ2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ ಇನಿಂಗ್ಸ್–45 ರನ್ ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.