ADVERTISEMENT

27ರಿಂದ ದಕ್ಷಿಣ ಆಫ್ರಿಕಾದಲ್ಲಿ ‘ತ್ರೀ ಟಿ ಕ್ರಿಕೆಟ್’ಗೆ ಚಲನೆ

ಪಿಟಿಐ
Published 17 ಜೂನ್ 2020, 14:28 IST
Last Updated 17 ಜೂನ್ 2020, 14:28 IST
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್   

ಜೋಹಾನ್ಸ್‌ಬರ್ಗ್: ದೀರ್ಘ ಲಾಕ್‌ಡೌನ್‌ ನಂತರ ಮತ್ತೆ ಕ್ರಿಕೆಟ್‌ ಅಯೋಜನೆಗೆ ದಕ್ಷಿಣ ಆಫ್ರಿಕಾ ಸಿದ್ಧವಾಗಿದೆ. ಅದೂ ವಿನೂತನ ರೀತಿಯಲ್ಲಿ!

ಇದೇ 27ರಿಂದ ‘ತ್ರೀ ಟಿ ಕ್ರಿಕೆಟ್‌’ ಟೂರ್ನಿಗೆ ಚಾಲನೆ ನೀಡಲಿದೆ. ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುವ ಒಂದು ಪಂದ್ಯದಲ್ಲಿ ಮೂರು ತಂಡಗಳು ಆಡಲಿವೆ.

‘ಚೊಚ್ಚಲ ಸಾಲಿಡಾರಿಟಿ ಕಪ್ ಇದಾಗಿದೆ. ಮೂರು ತಂಡಗಳು ಸ್ಪರ್ಧಿಸಲಿವೆ. ದಕ್ಷಿಣ ಆಫ್ರಿಕಾದ ಖ್ಯಾತನಾಮ ಆಟಗಾರರು ಆಡಲಿದ್ಧಾರೆ. ಈಗಲ್ಸ್‌ ತಂಡವನ್ನು ಎಬಿ ಡಿವಿಲಿಯರ್ಸ್, ಕಿಂಗ್‌ಫಿಷರ್ಸ್ ತಂಡವನ್ನು ಕಗಿಸೊ ರಬಾಡ ಮತ್ತು ಕೈಟ್ಸ್‌ ತಂಡವನ್ನು ಕ್ವಿಂಟನ್ ಡಿ ಕಾಕ್ ಮುನ್ನಡೆಸುವರು’ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ದಕ್ಷಿಣ ಆಫ್ರಿಕಾದ ಜನರು ಕ್ರಿಕೆಟ್‌ನ ಆನಂದ ಅನುಭವಿಸದೇ ಬಹಳ ದಿನಗಳಾದವು. ವಿಶ್ವದ ಎಲ್ಲ ಕ್ರಿಕೆಟ್‌ಪ್ರೇಮಿಗಳ ಸ್ಥಿತಿಯೂ ಇದೇ ಆಗಿದೆ. ಆಟಗಾರರು ಸಹ ಕ್ರೀಡಾಂಗಣಕ್ಕೆ ಮರಳುವ ತವಕದಲ್ಲಿದ್ದಾರೆ. ಆದ್ದರಿಂದಲೇ ಸಾಲಿಡಾರಿಟಿ ಕಪ್ ಆಯೋಜಿಸಿದ್ದೇವೆ. ಇದೊಂದು ಹೊಸ ಮಾದರಿಯಾಗಿದ್ದು, ರೋಚಕವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರೇಕ್ಷಕರಿಗೆ ಇದರಿಂದ ಬಹಳಷ್ಟು ಮನರಂಜನೆ ಲಭಿಸಲಿದೆ ಎಂಬ ವಿಶ್ವಾಸವಿದೆ’ ಎಂದು ಸಿಎಸ್‌ಇ ನಿರ್ದೇಶಕ ಗ್ರೆಮ್ ಸ್ಮಿತ್ ಹೇಳಿದ್ದಾರೆ.

36 ಓವರ್‌ಗಳ ಒಂದು ಪಂದ್ಯ ಇದಾಗಿದ್ದು. ಮೂರು ತಂಡಗಳೂ ಏಕಕಾಲದಲ್ಲಿ ಕಣಕ್ಕಿಳಿಯಲಿವೆ. ತಿ ಹೆಚ್ಚು ರನ್‌ ಗಳಿಸುವ ತಂಡಕ್ಕೆ ಚಿನ್ನ, ಇನ್ನುಳಿದ ಎರಡು ತಂಡಗಳಿಗೆ ಬೆಳ್ಳಿ ಮತ್ತು ಕಂಚಿನ ಪದಕ ನೀಡಲಾಗುವುದು.

ಈ ತ್ರೀ ಟೀಮ್ ಕ್ರಿಕೆಟ್‌ ಮೂಲಕ ನಿಧಿ ಸಂಗ್ರಹಕ್ಕೂ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.