ADVERTISEMENT

ಕ್ರಿಕೆಟ್‌ ಟೂರ್ನಿ: ಪ್ರಶಸ್ತಿಗಾಗಿ ಆಂಧ್ರ–ಛತ್ತೀಸಗಡ ತಂಡಗಳ ಹಣಾಹಣಿ

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿ ಫೈನಲ್ ಇಂದು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:45 IST
Last Updated 2 ಆಗಸ್ಟ್ 2019, 19:45 IST
ಆಂಧ್ರ ತಂಡದ ರಿಕಿ ಭುಯ್ 
ಆಂಧ್ರ ತಂಡದ ರಿಕಿ ಭುಯ್    

ಬೆಂಗಳೂರು: ಆಂಧ್ರ ಕ್ರಿಕೆಟ್ ತಂಡ ಮತ್ತು ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ ತಂಡಗಳು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಫೈನಲ್‌ನಲ್ಲಿ ಶನಿವಾರ ಮುಖಾಮುಖಿಯಾಗಲಿವೆ.

ಸೆಮಿಫೈನಲ್‌ನಲ್ಲಿ ಆತಿಥೇಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಇಲೆವನ್ ತಂಡದ ಎದುರು ಗೆದ್ದ ಆಂಧ್ರ ಫೈನಲ್ ಪ್ರವೇಶಿಸಿತ್ತು. ಆಲೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಆಂಧ್ರದ ರಿಕಿ ಭುಯ್ ದ್ವಿಶತಕ (ಔಟಾಗದೆ 204) ಹೊಡೆದಿದ್ದರು. ಶೋಯಬ್ ಮೊಹಮ್ಮದ್ ಖಾನ್ ಅವರ ಆಲ್‌ರೌಂಡ್ ಆಟವು ಆಂಧ್ರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಜಿ. ಮನೀಷ್ ಕೂಡ ಮಿಂಚಿದ್ದರು.

ಕೆಎಸ್‌ಸಿಎ ತಂಡದ ಪ್ರಸಿದ್ಧಕೃಷ್ಣ ಮತ್ತು ಸ್ಪಿನ್ನರ್ ಜೆ. ಸುಚಿತ್ ಅವರ ಉತ್ತಮ ಬೌಲಿಂಗ್ ಮುಂದೆಯೂ ಆಂಧ್ರದ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದ್ದರು.

ADVERTISEMENT

ಛತ್ತೀಸಗಡ ಕ್ರಿಕೆಟ್ ಸಂಘವು ನಾಲ್ಕರ ಘಟ್ಟದಲ್ಲಿ ಬಾಂಗ್ಲಾ ಕ್ರಿಕೆಟ್ ಮಂಡಳಿಯ ವಿರುದ್ಧ ಜಯಿಸಿತ್ತು. ತಂಡದ ಜೀವನ್‌ಜ್ಯೋತ್ ಸಿಂಗ್, ಅಮನದೀಪ್ ಖರೆ, ರಿಷಭ್ ತಿವಾರಿ, ಅನುಜ್ ತಿವಾರಿ ಅವರು ತಂಡಕ್ಕೆ ಉತ್ತಮ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ. ಶುಭಂ ಅಗರವಾಲ್, ಪುನಿತ್ ದಾತೆ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು.

ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲದಿಂದ ಕೂಡಿವೆ. ಆದ್ದರಿಂದ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.